spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆ ರಾಜ್ಯಕ್ಕೇ ಮಾದರಿ: ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಸ್ವಗೃಹಗಳಲ್ಲೇ ಚಿಕಿತ್ಸೆ

- Advertisement -Nitte

ಕಾಸರಗೋಡು:  ಜಿಲ್ಲೆಯಲ್ಲಿ ರೋಗ ಲಕ್ಷಣಗಳಿಲ್ಲದೇ ಇರುವ ಕೋವಿಡ್ ರೋಗಿಗಳಿಗೆ ಸ್ವಗೃಹಗಳಲ್ಲೇ ದಾಖಲಾತಿ ಚಿಕಿತ್ಸೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಈಗ 151 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರ್.ಟಿ.ಪಿ.ಸಿ.ಆರ್., ಆಂಟಿಜೆನ್ ಟೆಸ್ಟ್ ಪಾಸಿಟಿವ್ ಆಗಿದ್ದರೂ ಯಾವುದೇ ರೋಗ ಲಕ್ಷಣ ಹೊಂದದೇ ಇರುವ ಕೊರೋನಾ ರೋಗಿಗಳನ್ನು ತಮ್ಮ ತಮ್ಮ ಮನೆಗಳಲ್ಲೇ ದಾಖಲಾತಿ ನಡೆಸಿ ಚಿಕಿತ್ಸೆ ನೀಡುವ ವಿಧಾನ ಇದೀಗ ಆರಂಭಗೊಂಡಿದೆ. ಕೇರಳ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಈ ವ್ಯವಸ್ಥೆ ಕಾಸರಗೋಡು ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ.
ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ , ಚೆರುವತ್ತೂರು ಗ್ರಾಮ ಪಂಚಾಯತ್, ಉದುಮ ಪಂಚಾಯತ್ ಮತ್ತು ನೀಲೇಶ್ವರ ನಗರಸಭೆಯಲ್ಲಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ವಗೃಹಗಳಲ್ಲಿ ಚಿಕಿತ್ಸೆಗೆ ಒಳಗಾಗುತ್ತಿರುವ ಮಂದಿಗೆ ವೈದ್ಯರು ಟೆಲಿ-ಮೆಡಿಸಿನ್ ಸೌಲಭ್ಯ ಮೂಲಕ ಚಿಕಿತ್ಸೆ ಖಚಿತಪಡಿಸುತ್ತಿದ್ದಾರೆ. ಇಂತಹ ರೋಗಳಿಗಳು ಸ್ವ-ನಿಗಾ ದಲ್ಲಿದ್ದು , ಇತರರೊಂದಿಗೆ ಯಾವುದೇ ಸಂಪರ್ಕ ಹೊಂದದೇ ಬದಲಾವಣೆಗಳಿದ್ದಲ್ಲಿ ಸಂಬಂಧಪಟ್ಟವರಿಗೆ ತಿಳಿಸುವ ವಿಧಾನ ಇತ್ಯಾದಿ ತರಬೇತಿ ನೀಡಲಾಗಿದೆ. ಆಯಾ ಗ್ರಾಮ ಪಂಚಾಯತ್ ಗಳ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಇವರ ಚಿಕಿತ್ಸೆ ಸಂಬಂಧ ವಿಚಾರಗಳ ಏಕೀಕಿರಣ ನಡೆಯುತ್ತಿದೆ.
ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಚೆಮ್ಮಟ್ಟಂವಯಲ್ ವಿಜ್ಞಾನ ಉದ್ಯಾನದ ಕೊರೋನಾ ನಿಯಂತ್ರಣ ಕೊಠಡಿಯಲ್ಲಿರುವ ಉದ್ಯೋಗಿಗಳು ದೂರವಾಣಿ ಮೂಲಕ ರೋಗಿಯೊಂದಿಗೆ ವಿಚಾರ ವಿನಿಮಯ ನಡೆಸುತ್ತಿದ್ದಾರೆ. ರೋಗಿಗೆ ಯಾವುದೇ ರೀತಿಯ ದೈಹಿಕ ಅಸ್ವಾಸ್ಥ್ಯ ತಲೆದೋರಿದರೆ ತಕ್ಷಣ ಆಸ್ಪತ್ರೆಗೆ ದಾಖಲಿಸುವ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂದಿ ಮಾನಸಿಕ ಒತ್ತಡಗಳಿಗೆ ಸಿಲುಕಿದ್ದರೆ ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಂಗವಾಗಿ ಟೆಲಿ ಕೌನ್ಸಿಲಿಂಗ್ ಕೂಡ ಲಭ್ಯವಿದೆ. ದಾಖಲಿಸಿರುವ ಮನೆಗಳ ಬಗ್ಗೆ ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳ ಪ್ರತಿನಿಧಿಗಳು ಸೂಕ್ತ ನಿಗಾ ಇರಿಸುತ್ತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss