Monday, July 4, 2022

Latest Posts

ಕಾಸರಗೋಡು ಜಿ.ಪಂ.ಅಧ್ಯಕ್ಷೆಯಾಗಿ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷರಾಗಿ ಶಾನವಾಸ್ ಪಾದೂರು ಆಯ್ಕೆ

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲಾ ಪಂಚಾಯತ್ ನ ನೂತನ ಅಧ್ಯಕ್ಷೆಯಾಗಿ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷರಾಗಿ ಶಾನವಾಸ್ ಪಾದೂರು ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಬೇಬಿ ಬಾಲಕೃಷ್ಣನ್ 8 ಮತಗಳು ಲಭಿಸಿವೆ. ಪ್ರತಿಸ್ಪರ್ಧಿಯಾಗಿದ್ದ ಜಮೀಲಾ ಸಿದ್ದೀಕ್ ಅವರಿಗೆ 7 ಮತಗಳು ಲಭಿಸಿದವು. ಇಬ್ಬರು ಬಿಜೆಪಿ ಸದಸ್ಯರು ಮತದಾನ ನಡೆಸಿರಲಿಲ್ಲ. ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅವರು ಬೇಬಿ ಬಾಲಕೃಷ್ಣನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾನವಾಸ್ ಪಾದೂರು ಅವರಿಗೆ 8 ಮಂದಿ ಮತ ಚಲಾಯಿಸಿದ್ದಾರೆ. ಪ್ರತಿಸ್ಪರ್ಧಿ ಜೋಮೋನ್ ಜೋಸೆಫ್ ಅವರಿಗೆ 7 ಮಂದಿ ಮತದಾನ ಮಾಡಿದ್ದಾರೆ. ಇಬ್ಬರು ಬಿಜೆಪಿ ಸದಸ್ಯರು ಯಾರಿಗೂ ಮತದಾನ ನಡೆಸಿರಲಿಲ್ಲ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಶಾನವಾಸ್ ಪಾದೂರು ಅವರ ಪದಗ್ರಹಣ ವೇಳೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಚುನಾವಣಾ ಪ್ರಕ್ರಿಯೆ ನಿಯಂತ್ರಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್, ಮಾಜಿ ಸಂಸದ ಪಿ.ಕರುಣಾಕರನ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ಮಾಜಿ ಶಾಸಕರಾದ ಕೆ.ಪಿ.ಸತೀಶ್ಚಂದ್ರನ್, ಸಿ.ಎಚ್.ಕುಂಞಬು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ.ವಿ.ಪಿ.ಪಿ.ಮುಸ್ತಾಫ, ಹರ್ಷಾದ್ ವರ್ಕಾಡಿ, ನ್ಯಾಯವಾದಿ ಗೋವಿಂದನ್ ಪಳ್ಳಿಕ್ಕಾಪಿಲ್, ಟಿ.ಕೃಷ್ಣನ್, ಪಿ.ವಿ.ಬಾಲಕೃಷ್ಣನ್, ಮೊಯ್ದೀನ್‌ಕುಂಞ ಕಳನಾಡು, ಅಸೀಜ್ ಕಡಪ್ಪುರಂ, ಕರಿವೆಳ್ಳೂರು ವಿಜಯನ್, ಕುರಿಯಾಕೋಸ್ ಪ್ಲಾಪರಂಬಿಲ್, ನ್ಯಾಯವಾದಿ ಎ.ಗೋವಿಂದನ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss