Wednesday, August 10, 2022

Latest Posts

ಕಾಸರಗೋಡು| ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣ: ಶೀಘ್ರವೇ ಕ್ರೈಂ ಬ್ರಾಂಚ್ ಯಿಂದ ಮಂಜೇಶ್ವರ ಶಾಸಕ ಖಮರುದ್ದೀನ್ ವಿಚಾರಣೆ

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ನಡೆದ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ರನ್ನು ಶೀಘ್ರ ಕ್ರೈಂ ಬ್ರಾಂಚ್ ವಿಚಾರಣೆ ನಡೆಸಲಿದೆ.
ಈ ಪ್ರಕರಣ ಸಂಬಂಧಿಸಿ ರಾಜ್ಯ ಕ್ರೈಂ ಬ್ರಾಂಚ್ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಲಭಿಸಿರುವ ದೂರುಗಳ ಪರಿಶೀಲನೆ ನಡೆಸಿದೆ.
ಎಂ.ಸಿ. ಖಮರುದ್ದೀನ್ ಅಧ್ಯಕ್ಷರಾಗಿರುವ ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿಗೆ ಸುಮಾರು 700ರಷ್ಟು ಮಂದಿಯಿಂದ ಠೇವಣಿ ಪಡೆಯಲಾಗಿದ್ದು,  ಜ್ಯುವೆಲ್ಲರಿಗಳು ಮುಚ್ಚಿರುವುದರಿಂದ ಠೇವಣಿ ಹಣ ಮರಳಿಸದಿರುವುದರಿಂದ ಗ್ರಾಹಕರು ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಲೇರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss