Wednesday, August 10, 2022

Latest Posts

ಕಾಸರಗೋಡು ಜ್ಯುವೆಲ್ಲರಿ ವಂಚನೆ ಪ್ರಕರಣ: ಎನ್ ಫೋರ್ಸ್ ಮೆಂಟ್ ತನಿಖೆ ಆರಂಭ

ಕಾಸರಗೋಡು: ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ಆರೋಪಿಯಾಗಿರುವ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದ ಕುರಿತು ಎನ್ ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇ.ಡಿ.) ತನಿಖೆಗೆ ಚಾಲನೆ ದೊರೆತಿದೆ. ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದ ಪ್ರಾಥಮಿಕ ಮಾಹಿತಿಗಳನ್ನು ಎನ್ ಫೋರ್ಸ್ ಮೆಂಟ್ ಸಂಗ್ರಹಿಸತೊಡಗಿದೆ. ಠೇವಣಿ ವಂಚನೆಗೆ ಸಂಬಂಧಿಸಿ ಅತೀ ಹೆಚ್ಚು ಕೇಸುಗಳು ದಾಖಲಾಗಿರುವ ಚಂದೇರ ಠಾಣಾ ಪೊಲೀಸರಿಂದ ಇ.ಡಿ. ಮಾಹಿತಿಗಳನ್ನು ಕಲೆಹಾಕಿದೆ. ತನಿಖೆಯ ನಿಮಿತ್ತ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿಯ 42 ಮಂದಿ ನಿರ್ದೇಶಕರ ಆಸ್ತಿಪಾಸ್ತಿಗಳು, ಆದಾಯ ಮೂಲಗಳು, ಹಣ ಲಭಿಸಿದ ದಾರಿ ಮುಂತಾದ ವಿಷಯಗಳ ಬಗ್ಗೆ ಮುಖ್ಯವಾಗಿ ತನಿಖೆ ನಡೆಯುತ್ತಿದೆ.
ಇದೇ ವೇಳೆ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ವಿರುದ್ಧದ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದ ಕುರಿತು ಕೇರಳ ವಿಧಾನಸಭಾ ಸಮಿತಿಯು ತನಿಖೆ ಕೈಗೊಳ್ಳಲಿದೆ. ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ನೀತಿ ಸಂಹಿತೆ ಉಲ್ಲಘಿಸಿದ್ದಾರೆಂದು ಆರೋಪಿಸಿ ನೇಮಂ ಶಾಸಕ, ಬಿಜೆಪಿ ವರಿಷ್ಠ ಓ.ರಾಜಗೋಪಾಲ್ ಅವರು ವಿಧಾನಸಭಾ ಅಧ್ಯಕ್ಷರಿಗೆ ನೀಡಿದ ದೂರಿನ ಮೇರೆಗೆ ಈ ತನಿಖೆಗೆ ನಿರ್ದೇಶಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss