Sunday, June 26, 2022

Latest Posts

ಕಾಸರಗೋಡು| ತಲಪಾಡಿ ಹೆಲ್ಪ್ ಡೆಸ್ಕ್ ನಲ್ಲಿ ನಿರಂತರ ಕಾರ್ಯವೆಸಗುತ್ತಿರುವ ಅಕ್ಷಯ ಸಿಬ್ಬಂದಿಗಳು

ಕಾಸರಗೋಡು: ಗಡಿ ಪ್ರದೇಶಗಳ ಮೂಲಕ ಇತರ ರಾಜ್ಯಗಳಿಂದ ಊರಿಗೆ ಮರಳುವ ಮಂದಿಗೆ ಸಹಾಯ ಒದಗಿಸಲು ತಲಪಾಡಿ ಪ್ರದೇಶದ ಚೆಕ್ ಪೋಸ್ಟ್ ಗಳಲ್ಲಿ ದುಡಿಯುತ್ತಿರುವ ಶಿಕ್ಷಕರ ಸಹಿತ ವಿವಿಧ ವಲಯಗಳ ಸಾಲಿನಲ್ಲಿ ಅಕ್ಷಯ ಜಿಲ್ಲಾ ಯೋಜನೆ ಕಚೇರಿಯ ಸಿಬ್ಬಂದಿಗಳ ಸೇವೆಯೂ ಅನನ್ಯವಾಗಿದೆ.

ಮೂರು ಶಿಫ್ಟ್ ಗಳಲ್ಲಿ 24 ತಾಸುಗಳೂ ಇಲ್ಲಿ ಸೇವೆ ನಡೆಯುತ್ತಿದೆ. ಗಡಿದಾಟಿ ಬರುವ ಪ್ರಯಾಣಿಕರ ಮಾಹಿತಿ ಸಂಗ್ರಹಿಸಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ನಡೆಸುವ ವೇಳೆ ತಲಪಾಡಿ ಹೆಲ್ಪ್ ಡೆಸ್ಕ್ ಸದಸ್ಯರ ಕರ್ತವ್ಯಕ್ಕೆ ತಲೆದೋರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಇವರು ಒದಗಿಸುತ್ತಿದ್ದಾರೆ.

ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ, ಸಂಜೆ 4 ರಿಂದ ರಾತ್ರಿ 12 ಗಂಟೆ ವರೆಗೆ, ರಾತ್ರಿ 12ರಿಂದ ಬೆಳಗ್ಗೆ 8 ಗಂಟೆ ವರೆಗಿನ ಮೂರು ಶಿಫ್ಟ್ ಗಳಲ್ಲಿ ಇಲ್ಲಿ ಸೇವೆ ಜರಗುತ್ತಿದೆ. ಪ್ರತಿ ಶಿಫ್ಟ್ ನಲ್ಲಿ ತಲಾ 5 ಮಂದಿ ಅಕ್ಷಯ ಘಟಕದಾರರು, ಅಕ್ಷಯ ಜಿಲ್ಲಾ ಕಚೇರಿಯ ಇಬ್ಬರು ಸಿಬ್ಬಂದಿಗಳು ಇರುವರು.

ನ್ಯಾಷನಲ್ ಇನ್ ಫಾರ್ಮೆ ಟಿಕ್ ಜಿಲ್ಲಾ ಅಧಿಕಾರಿಗಳ ಮತ್ತು ಐ.ಟಿ. ಮಿಷನ್ ಸಿಬ್ಬಂದಿಗಳ ಸಹಕಾರದೊಂದಿಗೆ ಅಕ್ಷಯ ವತಿಯಿಂದ ತಲಪ್ಪಾಡಿ ಹೆಲ್ಪ್ ಡೆಸ್ಕ್ ಚಟುವಟಿಕೆಗಳು ಸಕ್ರಿಯವಾಗಿವೆ ಎಂದು ಅಕ್ಷಯ ಕಾಸರಗೋಡು ಜಿಲ್ಲಾ ಯೋಜನೆ ಪ್ರಬಂಧಕ ಎನ್.ಎಸ್.ಅಜೀಷ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss