ಕಾಸರಗೋಡು: ಕುಂಬಳೆ – ಸೀತಾಂಗೋಳಿ ರಸ್ತೆಯ ನಾಯ್ಕಾಪು ಲಿಟ್ಲು ಲಿಲ್ಲಿ ಶಾಲಾ ಪರಿಸರದಲ್ಲಿ ಭಾನುವಾರ ಸಂಜೆ ಕಾರೊಂದು ಮಗುಚಿ ಬಿದ್ದು ಇಬ್ಬರು ದಾರುಣರಾಗಿ ಮೃತಪಟ್ಟ ಘಟನೆ ನಡೆದಿದೆ. ಅಲ್ಲದೆ ಗಂಭೀರಾವಸ್ಥೆಯಲ್ಲಿದ್ದ ಓರ್ವನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಾಸರಗೋಡು ತಳಂಗರೆ ನಿವಾಸಿ ಮಿತ್ತು (18), ಕುಂಬಳೆ ಬದ್ರಿಯಾ ನಗರದ ಅಬ್ದುಲ್ ಸಾಲಿ – ಹಸೀನಾ ದಂಪತಿಯ
ಪುತ್ರ ಹುಸೈನ್ (17) ಮೃತಪಟ್ಟ ದುರ್ದೈವಿಗಳು.
ಈ ಪೈಕಿ ಮಿತ್ತು ಅಪಘಾತ ನಡೆದ ಸ್ಥಳದಲ್ಲೇ ಮೃತರಾದರೆ, ಹುಸೈನ್ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟರು. ಜೊತೆಗಿದ್ದ ಮುಹಮ್ಮದ್ ಸುಹೈಲ್ ಗಂಭೀರಾವಸ್ಥೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು ನಾಲ್ಕು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದು , ಈ ಪೈಕಿ ಓರ್ವ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.