Monday, July 4, 2022

Latest Posts

ಕಾಸರಗೋಡು ನೆಲ್ಲಿಕುಂಜೆ ಕಡಪ್ಪುರದಲ್ಲಿ ತೀವ್ರಗೊಂಡ ಕಡಲ್ಕೊರೆತ

ಕಾಸರಗೋಡು: ಕಾಸರಗೋಡು ನಗರದ ನೆಲ್ಲಿಕುಂಜೆ ಕಡಪ್ಪುರದಲ್ಲಿ ಕಡಲ್ಕೊರೆತ ಕಳೆದ ಕೆಲವು ದಿನಗಳಿಂದ ಇನ್ನಷ್ಟು ತೀವ್ರಗೊಂಡಿದೆ. ನೆಲ್ಲಿಕುಂಜೆ ಕಡಪ್ಪುರ ಶಾಂತಿನಗರ ಎಂಬಲ್ಲಿ ಏಳು ತೆಂಗಿನಮರಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ.
ಇದೇ ವೇಳೆ ಈ ಭಾಗದಲ್ಲಿ ಸಮುದ್ರ ತಡೆಗೋಡೆಯು ನಾಶಗೊಂಡಿದೆ. ಅಲ್ಲದೆ ಸಮುದ್ರವು ಆರು ಮೀಟರ್ ನಷ್ಟು ದಡ ದಾಟಿದ್ದು , ಇದರಿಂದ ಕರಾವಳಿ ಪ್ರದೇಶದ 150ರಷ್ಟು ಕುಟುಂಬಗಳು ಆತಂಕದಲ್ಲಿವೆ. ಕಂದಾಯ ಅಧಿಕಾರಿಗಳು ಹಾಗೂ ನಗರಸಭಾ ಅಧಿಕಾರಿಗಳು ನೆಲ್ಲಿಕುಂಜೆ ಕಡಲ ಕಿನಾರೆಗೆ ಪದೇ ಪದೇ ಭೇಟಿ ನೀಡಿದರೂ
ಯಾವುದೇ ಪರಿಹಾರ ಕಾರ್ಯಗಳನ್ನು ಜಾರಿಗೊಳಿಸದೆ ಮರಳುತ್ತಿದ್ದಾರೆ ಎಂದು ಮೀನು ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕೇರಳ ಸರಕಾರವಾಗಲಿ ಅಥವಾ ಕಾಸರಗೋಡು ಜಿಲ್ಲಾಡಳಿತವಾಗಲಿ ಕಡಪ್ಪುರ ಪ್ರದೇಶದ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಲಾಗಿದೆ. ಕಡಲಬ್ಬರ ಮತ್ತಷ್ಟು ತೀವ್ರಗೊಂಡರೆ ಕರಾವಳಿ ಭಾಗದ ಜನರು ಭಾರೀ ಸಂಕಷ್ಟ ಎದುರಿಸಬೇಕಾಗಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss