Wednesday, August 10, 2022

Latest Posts

ಕಾಸರಗೋಡು| ಪೆರಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಜಾಗದಲ್ಲಿ ತರಕಾರಿ ಮಾರ್ಕೆಟ್ ಯಾರ್ಡ್ ಆರಂಭಿಸಲು ನಿರ್ಧಾರ

ಕಾಸರಗೋಡು: ಜಿಲ್ಲೆಯ ಪೆರಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಹತ್ತು ಎಕ್ರೆ ಕಂದಾಯ ಇಲಾಖೆಯ ಜಾಗದಲ್ಲಿ ತರಕಾರಿ ಮಾರ್ಕೆಟ್ ಯಾರ್ಡ್ ಆರಂಭಿಸಲು ಸುಭಿಕ್ಷ ಕೇರಳಂ ಕೋರ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜರಗಿದ ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಈ ಮಾರ್ಕೆಟ್ ಯಾರ್ಡ್ ನಲ್ಲಿ ರಖಂ ಆಗಿ ತಿಂಗಳ- ವಾರದ- ದಿನ ಗಣನೆಯಲ್ಲಿ ತರಕಾರಿ ಸಂಗ್ರಹ ಮತ್ತು ಮಾರಾಟ ನಡೆಸಲಾಗುವುದು. ಅತ್ಯಾಧುನಿಕ ರೀತಿಯಲ್ಲಿ ಈ ಮಾರ್ಕೆಟ್ ನಿರ್ಮಿಸಲು ನಿರ್ಧರಿಸಲಾಗಿದೆ. ಕಾಸರಗೋಡು ಜಿಲ್ಲೆಯ ಎಲ್ಲ ಕಡೆಗಳಿಂದ ತರಕಾರಿ ಸಂಗ್ರಹಿಸಿ ಮಾರಾಟ ನಡೆಸುವುದು ಮತ್ತು ಜಿಲ್ಲೆಯಲ್ಲಿ ಬೇಕಾದಷ್ಟು ಬೆಳೆಯದೇ ಇರುವ ತರಕಾರಿಗಳನ್ನು ಬೇರೆಡೆಗಳಿಂದ ತರಿಸಿ ವಿತರಣೆ ನಡೆಸಲು ಈ ಮೂಲಕ ಸಾಧ್ಯವಾಗಲಿದೆ.
ಹಾಲು ಉತ್ಪಾದಕ ಸಂಘಗಳನ್ನು ಕೇಂದ್ರೀಕರಿಸಿ ಗ್ರಾಮೀಣ ತರಕಾರಿಗಳ ಸಂಗ್ರಹ ಮತ್ತು ಮಾರಾಟ ನಡೆಸಲೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ಚಟುವಟಿಕೆ ನಡೆಸುವ ಸುಮಾರು 172 ಹಾಲು ಉತ್ಪಾದಕ ಸಂಘಗಳು ಜಿಲ್ಲೆಯಲ್ಲಿವೆ. ಈ ಸಂಘಗಳನ್ನು ಬಳಸಿ ಕೃಷಿಕರಿಂದ ಉತ್ಪನ್ನಗಳನ್ನು ಪಡೆದು ನೇರವಾಗಿ ಗ್ರಾಹಕರಿಗೆ ತಲಪಿಸಲು ಸಾಧ್ಯವಾಗುವ ರೀತಿಯಲ್ಲಿ ಈ ಮಾರ್ಕೆಟ್ ನಲ್ಲಿ ಸೌಲಭ್ಯ ಒದಗಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಸುಭಿಕ್ಷ ಕೇರಳಂ ಕೋರ್ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಯೋಜನೆಯ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ವರದಿ ವಾಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss