ಕಾಸರಗೋಡು: ಜಿಲ್ಲಾ ವ್ಯಾಪ್ತಿಯ ಪೆರ್ಲದ ತರಕಾರಿ ಅಂಗಡಿಯೊಂದರ ಕಾರ್ಮಿಕನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು , ಈ ನಿಟ್ಟಿನಲ್ಲಿ ಆರೋಗ್ಯ ಅಧಿಕಾರಿಗಳು ಪೆರ್ಲದ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ.
ಬದಿಯಡ್ಕ ಆರೋಗ್ಯ ಕೇಂದ್ರದಲ್ಲಿ ಪೆರ್ಲದ ತರಕಾರಿ ಅಂಗಡಿ ಕಾರ್ಮಿಕರಿಗೆ ಕೊರೋನಾ ರಾಂಡಮ್ ಚೆಕ್ ಅಪ್ ಮಾಡಲಾಗಿದೆ. ಅದರಂತೆ ತರಕಾರಿ ಅಂಗಡಿಯ ಸುಮಾರು 22 ವರ್ಷದ ಕಾರ್ಮಿಕನಿಗೆ ಕೋವಿಡ್ ದೃಢಪಟ್ಟಿದೆ. ಇದೇ ಪರಿಸರದಲ್ಲಿ ಸದಾ ಜನ ದಟ್ಟಣೆಯಿರುವ ಇತರ ಅಂಗಡಿಗಳು ಕಾರ್ಯಾಚರಿಸುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಪೆರ್ಲದ ತರಕಾರಿ ಅಂಗಡಿ ಕಾರ್ಮಿಕನಿಗೆ ಸಂಪರ್ಕ ಮೂಲಕ ಕೋವಿಡ್ ಬಾಧಿಸಿರುವುದಾಗಿ ಸಂಶಯಿಸಲಾಗಿದ್ದು , ಈತನ ಸಂಪರ್ಕ ಮಾಹಿತಿಯನ್ನು ಇನ್ನಷ್ಟೇ ಕಲೆಹಾಕಬೇಕಾಗಿದೆ.