Wednesday, August 10, 2022

Latest Posts

ಕಾಸರಗೋಡು: ಪ್ರಧಾನಮಂತ್ರಿ ದುರಂತ ಪರಿಹಾರ ನಿಧಿಯಿಂದ ರೋಗಿಗಳಿಗೆ ಚಿಕಿತ್ಸಾ ಆರ್ಥಿಕ ಸಹಾಯ ಮಂಜೂರು

ಕಾಸರಗೋಡು: ಪ್ರಧಾನಮಂತ್ರಿ ರಾಷ್ಟ್ರೀಯ ದುರಂತ ಪರಿಹಾರ ನಿಧಿಯಿಂದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ 5 ಮಂದಿಗೆ ಚಿಕಿತ್ಸೆಗಾಗಿ ಧನ ಸಹಾಯ ಮಂಜೂರು ಮಾಡಲಾಗಿದೆ.
ಪನಯಾಲ್ ನ ಜೆಶಿನ್ ಸಿನಿ ಮತ್ತು ತೃಕ್ಕರೀಪುರದ ಸಿ.ಎಂ.ಕುಂಞಹಮ್ಮದ್ ರಿಗೆ ತಲಾ 3 ಲಕ್ಷ ರೂ., ಚೆರ್ವತ್ತೂರಿನ ಅರವಿಂದಾಕ್ಷನ್ ಕೆ.ವಿ. ಅವರಿಗೆ 75 ಸಾವಿರ ರೂ., ವೆಳ್ಳರಿಕುಂಡು ಮಿಟ್ಟಿಸೋನಿ ಮತ್ತು ಮುಹಮ್ಮದ್ ರಂಶೀನ್ ಅವರಿಗೆ 50 ಸಾವಿರ ರೂ. ಗಳಂತೆ ಸಹಾಯ ಧನ ಮಂಜೂರು ಮಾಡಲಾಗಿದೆ. ಅಲ್ಲದೆ ಕಣ್ಣೂರು ಜಿಲ್ಲೆಯ ಮೂವರಿಗೂ ಚಿಕಿತ್ಸಾ ಆರ್ಥಿಕ ಸಹಾಯ ನೀಡಲಾಗಿದೆ. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಶಿಫಾರಸಿನಂತೆ ಈ ಧನಸಹಾಯ ಮಂಜೂರು ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss