Friday, July 1, 2022

Latest Posts

ಕಾಸರಗೋಡು| ಬದಿಯಡ್ಕ, ಮುಳ್ಳೇರಿಯ, ನಾಟೆಕಲ್ಲು ಪೇಟೆಗಳನ್ನು ಕಂಟೈನ್ ಮೆಂಟ್ ಝೋನ್ ಆಗಿ ಘೋಷಣೆ

ಕಾಸರಗೋಡು: ಕೋವಿಡ್ ಬಾಧೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕ , ಮುಳ್ಳೇರಿಯ, ನಾಟೆಕಲ್ಲು ಪೇಟೆಗಳನ್ನು ಹೊಸ ಕಂಟೈನ್ ಮೆಂಟ್ ಝೋನ್ ಆಗಿ ಶನಿವಾರ ಘೋಷಿಸಲಾಗಿದೆ.
ಬದಿಯಡ್ಕ ಪೇಟೆಯ ತಲೆಹೊರೆ ಕಾರ್ಮಿಕರೊಬ್ಬರಿಗೆ ಕೋವಿಡ್ ದೃಢಪಟ್ಟಿರುವ ಹಾಗೂ ನಾಟೆಕಲ್ಲು ಮತ್ತು ಮುಳ್ಳೇರಿಯ ಪೇಟೆಗಳಲ್ಲಿ ಇತರ ರಾಜ್ಯದಿಂದ
ಅಕ್ರಮವಾಗಿ ಜಿಲ್ಲೆಗೆ ಪ್ರವೇಶಿಸಿದ ಜನರಿಂದ ಕೊರೋನಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಈ ಪ್ರದೇಶಗಳನ್ನು ಕಂಟೈನ್ ಮೆಂಟ್ ಝೋನ್ ಗಳಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಘೋಷಿಸಿದ್ದಾರೆ.
ಬದಿಯಡ್ಕ ಪೇಟೆಯಲ್ಲಿ ರೋಗ ದೃಢಪಟ್ಟ ತಲೆಹೊರೆ ಕಾರ್ಮಿಕ ಅನೇಕ ವ್ಯಾಪಾರಿಗಳನ್ನು ಸಂಪರ್ಕಿಸಿರುವ ಹಿನ್ನೆಲೆಯಲ್ಲಿ ಬದಿಯಡ್ಕ ಪೇಟೆಯ ಎಲ್ಲ ವ್ಯಾಪಾರ ಸಂಸ್ಥೆಗಳನ್ನು 7 ದಿನಗಳ ಕಾಲ ಮುಚ್ಚುವಂತೆ ಆದೇಶಿಸಲಾಗಿದೆ.
ಮುಳ್ಳೇರಿಯ, ನಾಟೆಕಲ್ಲು ಪೇಟೆಗಳಲ್ಲೂ ವ್ಯಾಪಾರ ಸಂಸ್ಥೆಗಳನ್ನು 7 ದಿನಗಳ ಕಾಲ ಮುಚ್ಚಬೇಕಾಗಿದೆ. ಅನಿವಾರ್ಯ ಸಾಮಗ್ರಿಗಳ ಮಾರಾಟದ ಅಂಗಡಿಗಳು ಮಾತ್ರ ದಿನ ಬಿಟ್ಟು ದಿನ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ತೆರೆದು ಕಾರ್ಯಾಚರಿಸಬಹುದು.
ಆಟೋರಿಕ್ಷಾ ಹಾಗೂ ಟ್ಯಾಕ್ಸಿಗಳು ಓಡಾಟ ನಡೆಸುವಂತಿಲ್ಲ ಹಾಗೂ ನಿಲ್ದಾಣ ಪ್ರವೇಶಿಸುವಂತಿಲ್ಲ.
ಈ ಪ್ರದೇಶಗಳಲ್ಲಿ ಬಸ್ ನಿಲುಗಡೆ, ಪ್ರಯಾಣಿಕರನ್ನು ಇಳಿಸುವುದು, ಹತ್ತಿಸುವುದು ನಿಷೇಧಿಸಲಾಗಿದೆ. ಅಲ್ಲದೆ ಈ ಪ್ರದೇಶಗಳಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತು ಏರ್ಪಡಿಸಲಿದ್ದಾರೆ.
ರೋಗ ಹರಡದಂತೆ ಜನರು ಗರಿಷ್ಠ ಜಾಗರೂಕತೆ ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಜನರು ಗುಂಪು ಸೇರದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಆಗಾಗ ಸಾಬೂನು, ಹ್ಯಾಂಡ್ ವಾಷ್ ಬಳಸಿ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಸಿ ಕೈಗಳನ್ನು ರೋಗಾಣು ಮುಕ್ತಗೊಳಿಸುವುದು ಕಡ್ಡಾಯವಾಗಿದೆ.
ಕಾಡುದಾರಿ ಸಹಿತ ಇತರ ಗಡಿ ಪ್ರದೇಶಗಳ ಮೂಲಕ ಜನರು ಅಕ್ರಮವಾಗಿ ಕಾಸರಗೋಡು ಜಿಲ್ಲೆಗೆ ಪ್ರವೇಶಿಸದಂತೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅಕ್ರಮವಾಗಿ ಜಿಲ್ಲೆಗೆ ಪ್ರವೇಶಿಸುವ ಮಂದಿಯ ಮೂಲಕ ವ್ಯಾಪಕವಾಗಿ ಸೋಂಕು ಹರಡುತ್ತಿದೆ. ಈ ಬಗ್ಗೆ ಮಾಹಿತಿಗಳಿದ್ದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಬೇಕು. ಜನಪರ ಚಟುವಟಿಕೆಗಳಿಂದ ಮಾತ್ರ ರೋಗ ಹರಡುವಿಕೆ ನಿಯಂತ್ರಿಸಬಹುದು. ಜನರು ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸುವಂ‌ತೆ ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss