Latest Posts

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

ಉಡುಪಿ: ಮೂರು ದಿನಗಳಿಂದ ಉತ್ತಮ ಮಳೆ: 24 ತಾಸುಗಳಲ್ಲಿ ಸರಾಸರಿ 68 ಮಿ.ಮೀ. ವರ್ಷಧಾರೆ

ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಂಗಳವಾರವೂ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆ ದಾಖಲಾಗಿದೆ. ಇದೇ...

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತದ ಶಿಲೆಯನ್ನು ಅಯೋಧ್ಯೆಗೆ ತಲುಪಿಸಿದ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಉಡುಪಿ: ಹನುಮನುದಿಸಿದ ನಾಡು ಕರ್ನಾಟಕದಿಂದ ಅಂಜನಾದ್ರಿ ಬೆಟ್ಟದ ಶಿಲೆ ಶ್ರೀರಾಮ ಅವತರಿಸಿದ ಕ್ಷೇತ್ರ ಧರ್ಮ ನಗರಿ ಅಯೋಧ್ಯೆಗೆ ತಲುಪಿದೆ. ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರೀರಾಮ ಸೇನೆ ವತಿಯಿಂದ ತಮಗೆ ಹಸ್ತಾಂತರಿಸಿದ...

ಕಾಸರಗೋಡು| ಬಾಯಾರು ದೇವಸ್ಥಾನದ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್: ಅಶ್ಲೀಲ ವೀಡಿಯೋ‌ ಪೋಸ್ಟ್ ಮಾಡಿದ ಮೊಬೈಲ್ ನಂಬರ್ ಪಾಕಿಸ್ತಾನದ್ದು?

sharing is caring...!

ಕಾಸರಗೋಡು: ಕಾಸರಗೋಡು ಜಿಲ್ಲೆಯ ಉಪ್ಪಳ ಪೈವಳಿಕೆ ಸಮೀಪದ ಬಾಯಾರು ದೇವಸ್ಥಾನದ ಹೆಸರಿನಲ್ಲಿ ಇರುವ ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಅಶ್ಲೀಲ ವೀಡಿಯೋಗಳನ್ನು ಪೋಸ್ಟ್ ಮಾಡಿದ ಮೊಬೈಲ್ ನಂಬರ್ ಪಾಕಿಸ್ತಾನ ಮೂಲದ್ದಾಗಿದೆ ‌ಎಂಬ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ.
ಕಾಸರಗೋಡು ಜಿಲ್ಲೆಯ ಬಾಯಾರಿನ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹೆಸರಿನಲ್ಲಿ ಇದ್ದ ವಾಟ್ಸ್ಆ್ಯಪ್ ಗ್ರೂಪ್ ಒಂದರಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್ ಆದ ಘಟನೆ ಇತ್ತೀಚೆಗೆ ನಡೆದಿದ್ದು ಇದರಿಂದ ಶ್ರೀ ಕ್ಷೇತ್ರದ ಭಕ್ತಾದಿಗಳು ಆಕ್ರೋಶಗೊಂಡಿದ್ದಾರೆ. ಈ ಗ್ರೂಪ್ ನ್ನು ಆರಂಭ ಮಾಡಿದವರು ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದಾರೆ.

ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತರುವುದೇ ಕಮ್ಯೂನಿಸ್ಟರ ಮೂಲ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈಗಾಗಲೇ ಕಮ್ಯೂನಿಸ್ಟರ ಹಿಂದು ವಿರೋಧಿ ಧೋರಣೆಯನ್ನು ಶಬರಿಮಲೆ ವಿಷಯದಲ್ಲಿ ಜನಸಾಮಾನ್ಯರು ತಿಳಿದಿದ್ದಾರೆ. ಬಾಯಾರಿನ ಘಟನೆಯೂ ಕೂಡ ಕಮ್ಯೂನಿಸ್ಟರ ಹಿಂದು ಧರ್ಮ ವಿರೋಧಿ ಚಟುವಟಿಕೆಯ ಭಾಗವಾಗಿದೆ.

ಆ ವಾಟ್ಸ್ ಆ್ಯಪ್ ಗ್ರೂಪ್ ಗೆ ಹೆಸರು ಮಾತ್ರ ಶ್ರೀ ಕ್ಷೇತ್ರ ಬಾಯಾರು ಅಂತ ಇಡಲಾಗಿದೆ. ಊರ ದೇವಸ್ಥಾನದ ಹೆಸರಿನಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಆರಂಭಿಸಿದ ಕಮ್ಯೂನಿಸ್ಟ್ ನ ಕಾಮ್ರೇಡ್ ಬುದ್ಧಿಗೆ ಭಕ್ತರು ರೋಷಗೊಂಡಿದ್ದಾರೆ. ಇತರ ಎಡ್ಮಿನ್ ಗಳು ಕೂಡ‌ ಕಮ್ಯೂನಿಸ್ಟ್ ಪಕ್ಷದ ಪದಾಧಿಕಾರಿಗಳೇ ಆಗಿದ್ದಾರೆ. ಉಳಿದಂತೆ ಯಾವ್ಯಾವುದೋ ಊರಿನವರು ಗುಂಪಿನ ಸದಸ್ಯರು. ಈ ಗ್ರೂಪ್ ನಲ್ಲಿ ದೇವಸ್ಥಾನದ ವಿಷಯ ಹೊರತುಪಡಿಸಿ ಉಳಿದೆಲ್ಲ ರಾಜಕೀಯ ವಿಚಾರಗಳನ್ನು ಹಾಕುತ್ತಿದ್ದರು. ಇತ್ತೀಚೆಗೆ ಈ ಗ್ರೂಪ್‌ ಗೆ ಯಾರೇ ಬೇಕಾದರೂ ಸೇರಲು ಅವಕಾಶ ಆಗುವಂತೆ ಲಿಂಕ್ ನ ಮೂಲಕ ಆಸ್ಪದ ನೀಡಿದ್ದು ಹಲವಾರು ಜನರು ಈ ಗ್ರೂಪ್ ಗ್ರಾಮ ದೇವಸ್ಥಾನಕ್ಕೆ ಸಂಬಂಧಿಸಿದ ಗ್ರೂಪ್ ಎಂದು ಸೇರಿದ್ದರು‌.

ಆದರೆ ಮೇ‌ 22ರಂದು ಅದೇ ಗ್ರೂಪ್ ನಲ್ಲಿ ಅಶ್ಲೀಲ ‌ಸಿನೆಮಾಗಳನ್ನು ಪೋಸ್ಟ್ ಮಾಡಲಾಗಿತ್ತು. ಈ ಕುರಿತಾಗಿ ಈಗಾಗಲೇ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವಿಶ್ವ ಹಿಂದು ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಮಂಜೇಶ್ವರ ಪೊಲೀಸರಿಗೆ ಪ್ರತ್ಯೇಕ ‌ದೂರುಗಳನ್ನು ನೀಡಲಾಗಿದೆ‌.

ಇದರ ಜೊತೆಗೆ ಈಗ ಆ ವೀಡಿಯೋವನ್ನು ಬಾಯಾರು ದೇವಸ್ಥಾನದ ಗ್ರೂಪ್ ನಲ್ಲಿ ಹಾಕಿದ್ದು ಪಾಕಿಸ್ತಾನದ ಮೂಲದ‌ ಮೊಬೈಲ್ ಸಂಖ್ಯೆ ಎಂಬ ಆತಂಕಕಾರಿ ಮಾಹಿತಿ ಬಂದಿದ್ದು, ಬಾಯಾರಿನಲ್ಲಿರುವ ಕಮ್ಯೂನಿಸ್ಟರಿಗೂ ಪಾಕಿಸ್ತಾನಕ್ಕೂ ಏನು‌ ನಂಟು ಎಂಬುದು ತನಿಖೆಯಿಂದಲೇ ಹೊರಬರಬೇಕಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಮಾಜ ವಿರೋಧಿ ಚಟುವಟಿಕೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕಾಗಿದೆ.

Latest Posts

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

ಉಡುಪಿ: ಮೂರು ದಿನಗಳಿಂದ ಉತ್ತಮ ಮಳೆ: 24 ತಾಸುಗಳಲ್ಲಿ ಸರಾಸರಿ 68 ಮಿ.ಮೀ. ವರ್ಷಧಾರೆ

ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಂಗಳವಾರವೂ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆ ದಾಖಲಾಗಿದೆ. ಇದೇ...

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತದ ಶಿಲೆಯನ್ನು ಅಯೋಧ್ಯೆಗೆ ತಲುಪಿಸಿದ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಉಡುಪಿ: ಹನುಮನುದಿಸಿದ ನಾಡು ಕರ್ನಾಟಕದಿಂದ ಅಂಜನಾದ್ರಿ ಬೆಟ್ಟದ ಶಿಲೆ ಶ್ರೀರಾಮ ಅವತರಿಸಿದ ಕ್ಷೇತ್ರ ಧರ್ಮ ನಗರಿ ಅಯೋಧ್ಯೆಗೆ ತಲುಪಿದೆ. ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರೀರಾಮ ಸೇನೆ ವತಿಯಿಂದ ತಮಗೆ ಹಸ್ತಾಂತರಿಸಿದ...

ವಿಜ್ಞಾನ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸ್ವಾಬ್ ಸಂಗ್ರಹಣೆ ತರಬೇತಿ ನೀಡಿ: ಡಿಸಿಎಂ ಅಶ್ವಥ್ ನಾರಾಯಣ

ರಾಮನಗರ : ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದ್ದು, ಸ್ವಾಬ್  ಸಂಗ್ರಹಣೆಗೆ ವಿಜ್ಞಾನ ಹಿನ್ನೆಲೆಯುಳ್ಳ ಬಿ.ಎಸ್.ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜಿಲ್ಲೆಯಲ್ಲಿ ನಿಯೋಜಿಸಿಕೊಳ್ಳಿ ಎಂದು ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ....

Don't Miss

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

ಉಡುಪಿ: ಮೂರು ದಿನಗಳಿಂದ ಉತ್ತಮ ಮಳೆ: 24 ತಾಸುಗಳಲ್ಲಿ ಸರಾಸರಿ 68 ಮಿ.ಮೀ. ವರ್ಷಧಾರೆ

ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಂಗಳವಾರವೂ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆ ದಾಖಲಾಗಿದೆ. ಇದೇ...

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತದ ಶಿಲೆಯನ್ನು ಅಯೋಧ್ಯೆಗೆ ತಲುಪಿಸಿದ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಉಡುಪಿ: ಹನುಮನುದಿಸಿದ ನಾಡು ಕರ್ನಾಟಕದಿಂದ ಅಂಜನಾದ್ರಿ ಬೆಟ್ಟದ ಶಿಲೆ ಶ್ರೀರಾಮ ಅವತರಿಸಿದ ಕ್ಷೇತ್ರ ಧರ್ಮ ನಗರಿ ಅಯೋಧ್ಯೆಗೆ ತಲುಪಿದೆ. ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರೀರಾಮ ಸೇನೆ ವತಿಯಿಂದ ತಮಗೆ ಹಸ್ತಾಂತರಿಸಿದ...
error: Content is protected !!