Tuesday, August 16, 2022

Latest Posts

ಕಾಸರಗೋಡು – ಮಂಗಳೂರು ಖಾಯಂ ಸಂಚಾರಕ್ಕೆ ಷರತ್ತು ಬದ್ಧ ಅನುಮತಿ: ನಿಬಂಧನೆ ಪ್ರಕಟ

ಕಾಸರಗೋಡು: ಕಾಸರಗೋಡು – ದಕ್ಷಿಣ ಕನ್ನಡ (ಮಂಗಳೂರು) ಖಾಯಂ ಸಂಚಾರಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಷರತ್ತು ಬದ್ಧ ಅನುಮತಿ ನೀಡಿದ್ದು , ಈ ಸಂಬಂಧ ಕಟ್ಟುನಿಟ್ಟಿನ ನಿಬಂಧನೆಗಳನ್ನು ಪ್ರಕಟಿಸಿದ್ದಾರೆ.

ಅಂತಾರಾಜ್ಯ ರೂಟ್ ನಲ್ಲಿ ಖಾಯಂ ಪ್ರಯಾಣ ನಡೆಸುವವರಿಗಾಗಿ ತಲಪ್ಪಾಡಿಯಲ್ಲಿ ನೋಂದಣಿ ಕ್ರಮಗಳನ್ನು ಸಿದ್ಧಪಡಿಸಲಾಗಿದೆ. ದಕ್ಷಿಣ ಕನ್ನಡಕ್ಕೆ ತೆರಳುವವರು ಮತ್ತು ಅಲ್ಲಿಂದ ಕಾಸರಗೋಡಿಗೆ ಖಾಯಂ ಆಗಿ ಬರಲು ಇಚ್ಛಿಸುವವರಿಗಾಗಿ ನೋಂದಣಿ ನಡೆಸುವ ಕಾಯಕವನ್ನು ತಲಪ್ಪಾಡಿಯಲ್ಲಿರುವ ಡಾಟಾ ಎಂಟ್ರಿ ಟೀಮ್ ನವರು ನಡೆಸಲಿದ್ದಾರೆ.

ಕೋವಿಡ್-19 ಜಾಗ್ರತಾ ಪೋರ್ಟಲ್ ನ ರೆಗ್ಯುಲರ್ ಪಾಸ್ ವಿಭಾಗದಲ್ಲಿ ಈ ನೋಂದಣಿ ಕಾರ್ಯ ನಡೆಯಲಿದೆ. ಇದರೊಂದಿಗೆ ಆಂಟಿಜೆನ್ ಟೆಸ್ಟ್ ನೆಗೆಟಿವ್ ಟೆಸ್ಟ್ ಸಲ್ಲಿಸಬೇಕಿದೆ. ಈ ಸರ್ಟಿಫಿಕೇಟ್ ನ್ನು ಪ್ರಯಾಣಿಕರು ತಲಪ್ಪಾಡಿಗೆ ಪ್ರವೇಶಿಸುವ ವೇಳೆ ಜಿಲ್ಲಾ ವೈದ್ಯಾಧಿಕಾರಿ ಅವರ ನೇತೃತ್ವದಲ್ಲಿ ನಡೆಸುವ ಆಂಟಿಜೆನ್ ಟೆಸ್ಟ್ ನ ನಂತರ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ನೌಕರಿ ಕೇಂದ್ರದ ಮುಖ್ಯಸ್ಥರ ಹೆಸರು, ವಿಳಾಸ, ಕಚೇರಿ ವಿಳಾಸ ಖಚಿತಪಡಿಸುವ ಗುರುತು ಚೀಟಿಯನ್ನು ಪ್ರಯಾಣಿಕರು ಕಡ್ಡಾಯವಾಗಿ ಇರಿಸಿಕೊಳ್ಳಬೇಕು. ಆರೋಗ್ಯ ವಿಭಾಗವು ಯಾವುದೇ ವಿಳಂಬವಿಲ್ಲದೆ ಸರ್ಟಿಫಿಕೇಟ್ ನೀಡಲಿದೆ. ಡಾಟಾ ಎಂಟ್ರಿ ಟೀಮ್ ನವರು ವ್ಯಕ್ತಿಯ ಮಾಹಿತಿ, ಇತರ ದಾಖಲೆ, ಆಂಟಿಜೆನ್ ಟೆಸ್ಟ್ ವರದಿಗಳನ್ನು ಕೋವಿಡ್-19 ಜಾಗ್ರತಾ ಪೋರ್ಟಲ್ ಗೆ ಅಪ್ ಲೋಡ್ ನಡೆಸಿದ ತಕ್ಷಣ ರೆಗ್ಯಲರ್ ಪಾಸ್ ದೊರೆಯಲಿದೆ. ಪ್ರತಿ ಪ್ರಯಾಣಿಕರೂ ಈ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಂದಿನ ಸೂಚನೆ ಪ್ರಕಟಗೊಳ್ಳುವ ವರೆಗೆ ಈ ಪ್ರಕಾರ ಖಾಯಂ ಪ್ರಯಾಣ ನಡೆಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss