ಕಾಸರಗೋಡು: ಒಬಿಸಿ ಮೋರ್ಚಾದ ಮಂಜೇಶ್ವರ ಮಂಡಲ ಸಮಿತಿಯ ವಿಶೇಷ ಸಭೆಯು ಕುಂಬಳೆಯಲ್ಲಿರುವ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಜರಗಿತು.ಒಬಿಸಿ ಮೋರ್ಚಾ ಕೇರಳ ರಾಜ್ಯ ಕೋಶಾಧಿಕಾರಿ, ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಉದ್ಘಾಟಿಸಿದರು. ಸಭೆಯಲ್ಲಿ ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಹಾಸ ಪೂಜಾರಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕೆ. ಐಲ್ ಸಭೆಯನ್ನುದ್ಧೇಶಿಸಿ ಮಾತನಾಡಿದರು.ಜಿಲ್ಲಾ ಸಮಿತಿ ಸದಸ್ಯ ಶಶಿ ಪೂಜಾರಿ ಉಪಸ್ಥಿತರಿದ್ಧರು. ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲ್ ಕುಮಾರ್ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಸಂಕಪ್ಪ ಸುವರ್ಣ ವಂದಿಸಿದರು.
ಜಿಲ್ಲಾ ರೂಪೀಕರಣದ ಅಂಗವಾಗಿ ಮೇ 24 ರಂದು ನಡೆಸುವ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಮಂಜೇಶ್ವರ ಮಂಡಲದಲ್ಲಿ 5000 ಮಾಸ್ಕ್ ಗಳನ್ನು ವಿತರಿಸಲು ಸಭೆಯು ತೀರ್ಮಾನಿಸಿದೆ.
ದೇವಾಲಯಗಳಲ್ಲಿ ಕಳ್ಳತನ, ಖಂಡನೆ
ಮಂಜೇಶ್ವರ ಮಂಡಲದ ವಿವಿಧ ಭಾಗದಲ್ಲಿರುವ ಹಿಂದು ದೇವಸ್ಥಾನಗಳಾದ ಬೆಜ್ಜ ಶ್ರೀ ರಕ್ತೇಶ್ವರಿ ಕ್ಷೇತ್ರ , ಅಂಗಡಿಪದವು ಶ್ರೀ ಕೊರಗತನಿಯ ಕ್ಷೇತ್ರ , ಬೆಜ್ಜ ಶ್ರೀ ಧೂಮಾವತಿ ಕ್ಷೇತ್ರ ಎಂಬೀ ಕ್ಷೇತ್ರಗಳಲ್ಲಿ ಕಳ್ಳತನ ನಡೆಸಿರುವುದನ್ನು ಸಭೆಯು ತೀವ್ರವಾಗಿ ಖಂಡಿಸಿದೆ.
ಮಂಜೇಶ್ವರ ಮಂಡಲದಲ್ಲಿ ಗಾಂಜಾ, ಅಲ್ಪಸಂಖ್ಯಾತ ಭಯೋತ್ಪಾದಕರಿಂದ ಕಿರುಕುಳ ಹೆಚ್ಚಾಗಿದ್ದು ಪೊಲೀಸ್ ನಿಷ್ಕ್ರಿಯವಾಗಿದೆ. ಹಿಂದುಗಳ ಆರಾಧನಾ ಕ್ಷೇತ್ರಗಳ ಪರಿಸರವನ್ನು ಲಾಕ್ ಡೌನ್ ನ ಮರೆಯಲ್ಲಿ ಇವರ ಆವಾಸಕೇಂದ್ರಗಳನ್ನಾಗಿ ಮಾಡಿದ್ದಾರೆಂದು ಸಭೆಯು ಆರೋಪಿಸಿದೆ. ಪೊಲೀಸರು ಇಂತಹ ಸಮಾಜದ್ರೋಹಿಗಳಿಗೆದುರಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಭೆಯು ಒತಾಯಿಸಿದೆ.
ಕಳವು ನಡೆದ ಕ್ಷೇತ್ರಗಳಿಗೆ ಒಬಿಸಿ ಮೋರ್ಚಾ ಮಂಡಲ, ಜಿಲ್ಲಾ , ರಾಜ್ಯ ಪದಾಧಿಕಾರಿಗಳು ಭೇಟಿ ನೀಡಿದ್ದರು.
ಅಧಿಕ ವಿದ್ಯುತ್ ಬಿಲ್ ವಿರುದ್ಧ ದೂರು
ಕೇರಳ ಸರಕಾರವು ವಿದ್ಯುತ್ ಮೇಲೆ ಅಧಿಕ ಚಾರ್ಜನ್ನು ವಸೂಲಾತಿ ಮಾಡುವುದನ್ನು ಸಭೆಯು ಖಂಡಿಸಿತು. ಲಾಕ್ ಡೌನ್ ನ ಹೆಸರಲ್ಲಿ ಜನಸಾಮಾನ್ಯರನ್ನು ಮನೆಯೊಳಗೆ ಕೂರಿಸಿ ಕೇವಲ 800 ರೂಪಾಯಿಯ ಕಿಟ್ ಕೊಟ್ಟು 8 ಸಾವಿರ ರೂಪಾಯಿ ಮೊತ್ತವನ್ನು ವಿದ್ಯುತ್ ಬಿಲ್ಲಿನ ಮೂಲಕ ವಸೂಲಾತಿ ಮಾಡುವುದು ಸಾಮಾನ್ಯ ಜನರನ್ನು ವಂಚನೆ ಮಾಡುವುದಾಗಿದೆ. ಇದಕ್ಕೆದುರಾಗಿ ಒಬಿಸಿ ಮೋರ್ಚಾ ಕನ್ಸೂಮರ್ ಕೋರ್ಟಿನಲ್ಲಿ ಕೇಸ್ ಫಾಯಿಲ್ ಮಾಡಲು ತೀರ್ಮಾನಿಸಿದೆ. ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಅವರಿಗೆ ಇದರ ಜವಾಬ್ದಾರಿ ನೀಡಲಾಯಿತು.
ಪಂಚಾಯತ್ ಸಮಿತಿಗಳ ಅಧ್ಯಕ್ಷರ ಆಯ್ಕೆ
ಮಂಜೇಶ್ವರ ಮಂಡಲದ ವಿವಿಧ ಪಂಚಾಯತ್ ಸಮಿತಿಗಳ ಒಬಿಸಿ ಮೋರ್ಚಾ ಅಧ್ಯಕ್ಷರನ್ನು ಮಂಡಲಾಧ್ಯಕ್ಷ ಚಂದ್ರಹಾಸ ಪೂಜಾರಿ ಘೋಷಣೆ ಮಾಡಿದರು. ಅದರಂತೆ ವರ್ಕಾಡಿ – ರವಿ ಮುಡಿಮಾರ್, ಮೀಂಜ –
ಹರೀಶ್ ಕೊಡ್ದೆ , ಪೈವಳಿಕೆ – ಗೋಪಾಲಕೃಷ್ಣ ಕೊಮ್ಮಂಗಳ ಅವರನ್ನು ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.