Wednesday, August 10, 2022

Latest Posts

ಕಾಸರಗೋಡು| ಮತ್ತೆ ಹೋರಾಟಕ್ಕೆ ಮುಂದಾದ ಎಂಡೋಸಲ್ಫಾನ್ ಸಂತ್ರಸ್ತರು!

ಕಾಸರಗೋಡು: ಅಗತ್ಯದ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನು ಏರ್ಪಡಿಸಬೇಕೆಂದು ಆಗ್ರಹಿಸಿ ಎಂಡೋಸಲ್ಫಾನ್ ಸಂತ್ರಸ್ತರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಇದರ ಅಂಗವಾಗಿ ಸೆಪ್ಟೆಂಬರ್ 28ರಂದು ಬೆಳಗ್ಗೆ 10ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಸಹಿ ಮರದಡಿಯಲ್ಲಿ ಎಂಡೋಸಲ್ಫಾನ್ ಬಾಧಿತರ ಜನಪರ ಒಕ್ಕೂಟದ ನೇತೃತ್ವದಲ್ಲಿ ಸೂಚನಾ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ. ಕನಿಷ್ಠ ಓರ್ವ ನ್ಯೂರೋಲಜಿಸ್ಟ್ ರ ನೇಮಕಾತಿ ಕೂಡ ನಡೆಸದೆ ಅವಗಣನೆ ನೀತಿಯನ್ನು ಕೇರಳ ಸರಕಾರವು ಅನುಸರಿಸುತ್ತಿದೆ. ಇದನ್ನು ಪ್ರತಿಭಟಿಸಿ ಆಂದೋಲನ ನಡೆಸಲು ನಿರ್ಧರಿಸಲಾಗಿದೆ. ಇದೇ ವೇಳೆ ಕನಿಷ್ಠ ಚಿಕಿತ್ಸೆಯಾದರೂ ದೊರಕುತ್ತಿದ್ದ ಕಾಸರಗೋಡು ಜಿಲ್ಲಾ ಆಸ್ಪತ್ರೆಯನ್ನು ಇದೀಗ ಕೋವಿಡ್ ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. ಇದರಿಂದ ಎಂಡೋ ಪೀಡಿತರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಈ ಬಗ್ಗೆ ಸಮಾಲೋಚಿಸಲು ಕಾಸರಗೋಡಿನಲ್ಲಿ ಜರಗಿದ ಎಂಡೋಸಲ್ಫಾನ್ ಬಾಧಿತರ ಜನಪರ ಒಕ್ಕೂಟದ ಸಭೆಯಲ್ಲಿ ಮುನೀಸಾ ಅಂಬಲತ್ತರ ಅಧ್ಯಕ್ಷತೆ ವಹಿಸಿದ್ದರು. ವಿಮಲಾ ಫ್ರಾನ್ಸಿಸ್, ಮಿಸ್ರಿಯಾ ಚೆಂಗಳ, ಸುರೇಶ್ ರಾಮನ್, ಶಾಲಿನಿ ಕೆ., ಸ್ನೇಹಾ ಪಿ.ವಿ., ಆಂಟನಿ ಪಿ.ಜೆ., ಸೀಮಾ ಮುರಳಿ, ರಮ್ಲ ಎಂ.ಸಿ., ಶಶಿ ಸಿ., ಅಭೀಶ್, ಭಾಸ್ಕರನ್ ಕೆ. ಮುಂತಾದವರು ಮಾತನಾಡಿದರು. ಅಂಬಲತ್ತರ ಕುಂಞಕಣ್ಣನ್ ಸ್ವಾಗತಿಸಿ, ಜಮೀಲ ಎಂ.ಪಿ. ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss