Tuesday, August 16, 2022

Latest Posts

ಕಾಸರಗೋಡು| ಮಧೂರು ಪಂಚಾಯತ್ ನಲ್ಲಿ ಆಂಟಿಜೆನ್ ಟೆಸ್ಟ್ ಶಿಬಿರ: 8 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

ಕಾಸರಗೋಡು: ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ನಡೆಸಲಾದ ಆಂಟಿಜೆನ್ ತಪಾಸಣೆಯಲ್ಲಿ 8 ಮಂದಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಖಚಿತವಾಗಿದೆ.  ಇವರಲ್ಲಿ ಇಬ್ಬರು ಕಾಸರಗೋಡು ನಗರಸಭೆಯ ನಿವಾಸಿಗಳಾಗಿದ್ದಾರೆ. ಉಳಿಯತ್ತಡ್ಕ ಅಟಲ್ ಜಿ ಸಭಾಂಗಣದಲ್ಲಿ ಈ ತಪಾಸಣೆ ನಡೆಯಿತು. ಒಟ್ಟು 80 ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು.
ಕಾಸರಗೋಡು ಜಿಲ್ಲೆಯಲ್ಲಿ ಸಾಮಾಜಿಕ ಸಂಪರ್ಕದ ಮೂಲಕ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ರೋಗ ಪ್ರತಿರೋಧ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿದೆ. ಇದರ ಅಂಗವಾಗಿ ವಿವಿಧ ಸೋಂಕು ಬಾಧಿತ ಪ್ರದೇಶಗಳಲ್ಲಿ ನಡೆಸುತ್ತಿರುವ ತಪಾಸಣೆಗಳ ಅಂಗವಾಗಿ ಮಧೂರಿನಲ್ಲೂ ಆಂಟಿಜೆನ್ ತಪಾಸಣೆ ನಡೆಸಲಾಗಿದೆ.
ಮಧೂರು ಗ್ರಾಮ ಪಂಚಾಯತ್ ನಲ್ಲಿ ಈ ವರೆಗೆ ಒಟ್ಟು 96 ಕೋವಿಡ್ ಪಾಸಿಟಿವ್ ಕೇಸುಗಳು ಖಚಿತಗೊಂಡಿವೆ. 59 ಮಂದಿ ಗುಣಮುಖರಾಗಿದ್ದಾರೆ. ಈಗ ಪಂಚಾಯತ್ ನ 2, 3, 6, 7, 9, 10, 11, 14, 16, 17, 18, 19ನೇ ವಾರ್ಡ್ ಗಳನ್ನು ಹಾಟ್ ಸ್ಪಾಟ್ ವಲಯಗಳಾಗಿ ಘೋಷಿಸಲಾಗಿದೆ.
ಅರೋಗ್ಯ ತಪಾಸಣಾ ಶಿಬಿರಕ್ಕೆ ಡಾ.ಹರ್ಷ, ಕುಂಬಳೆ ಬ್ಲಾಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಜ್ಯೂನಿಯರ್ ಹೆಲ್ತ್ ಇನ್ ಸ್ಪೆಕ್ಟರ್ ರಾದ ಷೌಕತ್, ಅರುಣ್, ಗೋಪಾಲಕೃಷ್ಣನ್, ಜ್ಯೂನಿಯರ್ ಪಬ್ಲಿಕ್ ಹೆಲ್ತ್ ದಾದಿಯರಾದ ಶೋಭಾ, ಅಂಬಿಳಿ, ಶಾಂತಾ, ಮಾಯಾ, ನರ್ಸಿಂಗ್ ಸಹಾಯಕಿ ವೇದಾವತಿ ಮೊದಲಾದವರು ನೇತೃತ್ವ ವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss