Wednesday, June 29, 2022

Latest Posts

ಕಾಸರಗೋಡು| ಮಹಿಳೆಯ ಮೃತದೇಹದ ದಾಖಲೆ ನೀಡದೆ ಸತಾಯಿಸುವಿಕೆ : ಬಿಜೆಪಿಯಿಂದ ಪ್ರತಿಭಟನೆ

ಕಾಸರಗೋಡು: ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟ ಮಂಜೇಶ್ವರ ತಾಲೂಕು ಹೇರೂರಿನ ಗೃಹಿಣಿ ಶೋಭಾ ಅವರ ಮೃತದೇಹವನ್ನು ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಿ ಯಾವುದೇ ದಾಖಲೆಯನ್ನು ನೀಡದೆ ಸತಾಯಿಸಲಾಗುತ್ತಿತ್ತು. ಇದನ್ನು ಗಮನಿಸಿ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ವಿಚಾರಿಸಿ ಪ್ರತಿಭಟಿಸಿದ್ದಕ್ಕೆ ಬಿಜೆಪಿ ಯುವ ನಾಯಕರಾದ, ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೆೃ ಅವರನ್ನು ಬಂಧಿಸಲಾಗಿದೆ.
ನಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಸಮಸ್ಯೆಯನ್ನು ಬಗೆಹರಿಸಿ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗುವಂತೆ ಮಾಡಿದರು.
ಕಾಸರಗೋಡು ಜಿಲ್ಲೆಯವರ ದಯನೀಯ ಪರಿಸ್ಥಿತಿ ಇದು. ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಮೃತದೇಹವನ್ನು ಕೊಡದೆ ಸತಾಯಿಸುತ್ತಿರೋದು ಅಮಾನವೀಯ ವಿಷಯ. ಕಾಸರಗೋಡು ಜಿಲ್ಲೆಯಲ್ಲಿ ಪೋಸ್ಟ್‌ಮಾರ್ಟಮ್ ಮಾಡಲೂ ವ್ಯವಸ್ಥೆ ಇಲ್ಲದ ಪರಿಸ್ಥಿತಿ ಇದೆ. ಈ ಅಸಹಾಯಕ ಕುಟುಂಬದ ಧ್ವನಿಯಾಗಲು ಹೋದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಒಂದು ಪೋಸ್ಟ್‌ಮಾರ್ಟಂಗಾಗಿ ಮೂರು ದಿನಗಳ ವರೆಗೆ ಕಾದು ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷರ ಮತ್ತು ಬಿಜೆಪಿ ನೇತಾರರ ಪ್ರಬಲವಾದ ಹೋರಾಟದ ನಂತರ ದೂರದ ಪೆರಿಯಾರಂ‌ಗೆ ಪೋಸ್ಟ್‌ ಮಾರ್ಟಂ ಮಾಡಲು ವ್ಯವಸ್ಥೆ ಮಾಡಲಾಗಿದೆಯೆಂದರೆ ಕಾಸರಗೋಡಿನ ಪರಿಸ್ಥಿತಿ ಎಲ್ಲಿಯ ವರೆಗೆ ಬಂದಿದೆ ಎಂದು ಇದರಲ್ಲಿ ಅರಿಯಬಹುದು.
ನಮಗೆ ಬಿಬಿಸಿಯಲ್ಲೋ, ವಾಷಿಂಗ್ಟನ್‌ ಪತ್ರಿಕೆಯಲ್ಲೋ ಬರುವ ಕಣ್ಣಿಗೆ ಕಾಣದ “ನಂಬರ್ ವನ್ ಕೇರಳದ” ಅಗತ್ಯವಿಲ್ಲ. ಈ ರೀತಿಯ ಅಮಾನವೀಯ ಪರಿಸ್ಥಿತಿ ಇನ್ನು ಮುಂದೆ ಕಾಸರಗೋಡಿಗರಿಗೆ ಬರದಿದ್ದರೆ ಸಾಕು ಎಂದು ಬಿಜೆಪಿ ಜಿಲ್ಲಾ ಸಮಿತಿ ತಿಳಿಸಿದೆ.
ಮಂಗಲ್ಪಾಡಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಹೇರೂರು ಪ್ರದೇಶದ ಈ ಅಸಹಾಯಕ ಕುಟುಂಬದ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸರು ತೋರಿಸಿದ ಅನಾಸ್ಥೆಯನ್ನು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಹಾಗೂ ವಿನಾಕಾರಣ ಬಂಧಿಸಿದ ಬಿಜೆಪಿ ನೇತಾರ ವಿಜಯ್ ಕುಮಾರ್ ರೈ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಘಟಕ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss