ಬದಿಯಡ್ಕ: ಕಾಸರಗೋಡು ಜಿಲ್ಲಾ ರೂಪೀಕರಣದ ವಾಷಿ೯ಕ ದಿನವಾದ ಮೇ 24 ರಂದು ಭಾರತೀಯ ಜನತಾ ಪಕ್ಷವು ಜಿಲ್ಲೆಯಾದ್ಯಂತ 2 ಲಕ್ಷಕ್ಕಿಂತ ಮೇಲ್ಪಟ್ಟು ಮಾಸ್ಕ್ ಗಳನ್ನು ವಿತರಿಸಲು ಯೋಜನೆ ಹಮ್ಮಿಕೊಂಡಿದೆ.
ಈ ನಿಟ್ಟಿನಲ್ಲಿ ಬೆಳ್ಳೂರು ಸೇವಾಸಹಕಾರಿ ಬೇಂಕ್ ಹಾಗೂ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರ ವತಿಯಿಂದ ಮಾಸ್ಕ್ ಗಳನ್ನು ನೀಡಲಾಯಿತು. ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ವಿ.ಎಸ್. ಸುಬ್ರಮಣ್ಯ ಕಡಂಬಳಿತಾಯ ಅವರು ಬಿಜೆಪಿ ಕಾಸರಗೋಡು ಮಂಡಲ ಕಾರ್ಯದರ್ಶಿ ಸತ್ಯವತಿ ಸಿ. ರೈಯವರಿಗೆ ಮಾಸ್ಕ್ ಗಳನ್ನು ಹಸ್ತಾಂತರಿಸಿದರು.
ಪೆರಡಾಲ ಸೇವಾ ಸಹಕಾರಿ ಬೇಂಕ್ ಅಧ್ಯಕ್ಷ ಜಯದೇವ ಖಂಡಿಗೆ ಅವರ ಉಪಸ್ಥಿತಿಯಲ್ಲಿ ಉಪಾಧ್ಯಕ್ಷ ಗಣಪತಿ ಪ್ರಸಾದ ಕುಳಮರ್ವ ಅವರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ ಅವರಿಗೆ ಹಸ್ತಾಂತರಿಸಿದರು.