Monday, July 4, 2022

Latest Posts

ಕಾಸರಗೋಡು| ಮೊಗ್ರಾಲ್ ಪುತ್ತೂರು ಸರಕಾರಿ ಟೆಕ್ನಿಕಲ್ ಹೈಸ್ಕೂಲ್: ಕನ್ನಡ 8ನೇ ತರಗತಿಗೆ ಅರ್ಜಿ ಆಹ್ವಾನ: ಜೂನ್ 10ರಂದು ಕೊನೆ ದಿನ

ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಚಾಯತ್ ವ್ಯಾಪ್ತಿಯ ಬೆದ್ರಡ್ಕ (ಬೆಲ್ ಸಂಸ್ಥೆಯ ಸಮೀಪ)ದ ಕೇರಳ ಸರಕಾರ ಟೆಕ್ನಿಕಲ್ ಇಲಾಖೆಯ ಅಧೀನಕ್ಕೆ ಒಳಪಟ್ಟ ಸರಕಾರಿ ಟೆಕ್ನಿಕಲ್ ಹೈಸ್ಕೂಲ್‌ನ 8ನೇ ಕನ್ನಡ ತರಗತಿ ಪ್ರವೇಶಕ್ಕೆ ಇದೀಗ 7ನೇ ತರಗತಿ ತೇರ್ಗಡೆಯಾದವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಟೆಕ್ನಿಕಲ್ ಹೈಸ್ಕೂಲ್‌ನಲ್ಲಿ ಕಲಿತರೆ ದೇಶ ವಿದೇಶಗಳಲ್ಲಿ ಧಾರಾಳ ಉದ್ಯೋಗ ಸಾಧ್ಯತೆಯಿರುವ ಕೋರ್ಸ್ ಇದಾಗಿದೆ. ಅಲ್ಲದೆ 8, 9 ಹಾಗೂ 10ನೇ ತರಗತಿ ತನಕ ಉಚಿತ ಶಿಕ್ಷಣ ಪಡೆಯಬಹುದು.

ಇಲ್ಲಿಂದ ಹತ್ತನೇ ತರಗತಿ ಟಿಎಚ್‌ಎಸ್‌ಎಲ್‌ಸಿ ತೇರ್ಗಡೆಯಾದರೆ ಐಟಿಐ/ಪಾಲಿಟೆಕ್ನಿಕ್ ಪ್ರವೇಶಕ್ಕೆ ಗ್ರೇಸ್ ಮಾರ್ಕ್ ಲಭಿಸುವುದು. ಅಲ್ಲದೆ ಎಂಜಿನಿಯರಿಂಗ್ ಕೋರ್ಸ್ ಅರ್ಹತೆ ಪಡೆಯಬಹುದು. ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಆಸಕ್ತ ವಿದ್ಯಾರ್ಥಿಗಳ ಹೆತ್ತವರು 8592887942 ಮೊಬೈಲ್ ನಂಬ್ರದಲ್ಲಿ ಅಲ್ಲಿನ ಅಧ್ಯಾಪಕರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss