Sunday, June 26, 2022

Latest Posts

ಕಾಸರಗೋಡು| ವಿದೇಶಗಳಿಂದ ಮರಳುವವರಿಗೆ ಜಿಲ್ಲೆಯ ತೆಂಕಣ ಭಾಗದಲ್ಲಿ ಕೋವಿಡ್ ಕೇರ್ ಸೆಂಟರ್

ಕಾಸರಗೋಡು: ವಿದೇಶಗಳಿಂದ ಕಾಸರಗೋಡು ಜಿಲ್ಲೆಗೆ ಮರಳುವವರನ್ನು ಜಿಲ್ಲೆಯ ತೆಂಕಣ ಭಾಗದಲ್ಲಿ ಸಜ್ಜುಗೊಳಿಸಲಾದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಈ ಚಟುವಟಿಕೆಗಳ ಏಕೀಕರಣಕ್ಕೆ ನೋಡೆಲ್ ಅಧಿಕಾರಿಯಾಗಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರನ್ನು ನೇಮಿಸಲಾಗಿದೆ. ವಿದೇಶಗಳಿಂದ ಊರಿಗೆ ಮರಳುವವರನ್ನು ಕೇರಳ ಸರಕಾರವು ವಿಶೇಷವಾಗಿ ಸಜ್ಜುಗೊಳಿಸಿದ ಕ್ವಾರಂಟೈನ್ ಕೇಂದ್ರಗಳಲ್ಲಿ 7 ದಿನಗಳ ಕಾಲ ದಾಖಲಿಸಿ ಸ್ಯಾಂಪಲ್ ತಪಾಸಣೆ ನಡೆಸಲಾಗುವುದು. ಕೋವಿಡ್ 19 ಸೋಂಕು ಖಚಿತಗೊಂಡವರನ್ನು ಮುಂದಿನ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು. ವಯೋವೃದ್ಧರು, ಗರ್ಭಿಣಿಯರು, ಮಕ್ಕಳು ಮೊದಲಾವರನ್ನು 7 ದಿನಗಳ ಕ್ವಾಂರೆಂಟೈನ್ ನಿಂದ ಹೊರತುಪಡಿಸಲಾಗುವುದು ಎಂದು ಅವರು ಹೇಳಿದರು.
ತಪಾಸಣೆಯಲ್ಲಿ ನೆಗೆಟಿವ್ ಫಲಿತಾಂಶ ಹೊಂದಿದವರನ್ನು ಮುಂದಿನ ನಿಗಾಗಳಿಗಾಗಿ ಮನೆಗಳಲ್ಲೇ ಕ್ವಾರಂಟೈನ್ ನಲ್ಲಿ ಇರಿಸಲಾಗುವುದು. ಅವರ ಮನೆಗಳಲ್ಲಿ ಈ ಸಂಬಂಧ ವ್ಯವಸ್ಥೆಗಳಿರುವ ಕುರಿತು ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ಮಟ್ಟದ ಸಮಿತಿ ಖಚಿತಪಡಿಸಲಿದೆ. ಸ್ವಂತ ಮನೆಯಲ್ಲಿ ಸೌಕರ್ಯಗಳಿಲ್ಲದೆ ಇರುವ ಮಂದಿಯನ್ನು ( ಒಂದೊಮ್ಮೆ ಮನೆಯಲ್ಲಿ ಸೌಕರ್ಯಗಳಿದ್ದೂ, ಈ ಅವಧಿಯಲ್ಲಿ ಪ್ರತ್ಯೇಕ ಇರುವುದು ಉತ್ತಮ ಎಂದು ಆಗ್ರಹಿಸುವವರಿದ್ದರೆ) ಪ್ರತ್ಯೇಕ ವಸತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತವು 380 ವಸತಿಗೃಹಗಳ ಕೊಠಡಿಗಳನ್ನು ನಿಗದಿಪಡಿಸಿದೆ. ಈ ಕೊಠಡಿಗಳಿಗೆ ಸರಕಾರದ ಅನುಮತಿಯೊಂದಿಗೆ ದಿನ ಬಾಡಿಗೆ ನೀಡಲಾಗುವುದು. ವಸತಿಗೃಹಗಳ ಕೊಠಡಿಗಳಲ್ಲಿ ತಂಗುವ ಅನಿವಾಸಿ ಕೇರಳೀಯರಿಗೆ ಆಹಾರ ಪೂರೈಕೆ ನಡೆಸುವ ಹೊಣೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಈ ಎಲ್ಲ ಚಟುವಟಿಕೆಗಳ ಏಕೀಕರಣದ ಹೊಣೆಯನ್ನು ಕಾಸರಗೋಡು ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಅವರಿಗೆ ನೀಡಲಾಗಿದೆ ಎಂದರು.
ವಿಮಾನ ನಿಲ್ದಾಣಗಳಿಂದ ಅನಿವಾಸಿಗಳನ್ನು ಜಿಲ್ಲೆಯ ಕ್ವಾರೆಂಟೈನ್ ಕೇಂದ್ರಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಸಾರಿಗೆ ಅಧಿಕಾರಿ, ಆರ್.ಟಿ.ಒ. ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಆಡಳಿತವು ಸಜ್ಜುಗೊಳಿಸುವ ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ನಾನಗೃಹ – ಶೌಚಾಲಯಗಳನ್ನು ಯಥಾ ಸಮಯಗಳಲ್ಲಿ ಶುಚಿಗೊಳಿಸಲು ಪವರ್ ಪಂಪ್ (ಒಂದು ಕ್ವಾರೆಂಟೈನ್ ಗೆ ತಲಾ ಒಂದರಂತೆ) ಖರೀದಿಸಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಕ್ವಾರೆಂಟೈನ್ ನಲ್ಲಿ ಇರುವವರಿಗೆ ಸಹಾಯ ಒದಗಿಸಲು ಪಂಚಾಯತ್ ಮಟ್ಟದಲ್ಲಿ 20 ಮಂದಿ ಸ್ವಯಂ ಸೇವಕರನ್ನು ನೇಮಕಗೊಳಿಸಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ. ಕ್ವಾರೆಂಟೈನ್ ನಲ್ಲಿರುವವರು, ರೂಮ್ ಗಳಲ್ಲಿ ಕ್ವಾರೆಂಟೈನ್ ನಲ್ಲಿ ಇರುವಂತೆ ಸಲಹೆ ಪಡೆದವರು ದಾಖಲಾದ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss