Sunday, July 3, 2022

Latest Posts

ಕಾಸರಗೋಡು| ಸಂಭ್ರಮಿಸುವ ಕ್ಷಣ ಇದಲ್ಲ: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು

ಕಾಸರಗೋಡು: ಕಾಸರಗೋಡು ಜಿಲ್ಲೆಯು ಕೊರೋನಾ ಮುಕ್ತವಾಗಿದೆ. ಆದರೆ ನಿಗಾದಲ್ಲಿ ಒಂದಷ್ಟು ಮಂದಿ ಇದ್ದಾರೆ. ಆದ್ದರಿಂದ ಸಂಭ್ರಮ ಸಡಗರ ಹಂಚಿಕೊಳ್ಳುವ ಕಾಲ ಇನ್ನೂ ಕೂಡಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆ , ಕುಟುಂಬಶ್ರೀ, ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಅಗ್ನಿ ಶಾಮಕ ದಳ ಸಹಿತ ವಿವಿಧ ವಿಭಾಗಗಳು ಹಗಲು – ರಾತ್ರಿ ನಡೆಸಿರುವ ಸಂಘಟಿತ ಪ್ರಯತ್ನವು ಫಲ ನೀಡಿದೆ.

ಇಷ್ಟೆಲ್ಲ ಸಾಧನೆಗಳಿದ್ದರೂ ಜಾಗೃತಿ ಹಾಗೂ ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ಸಡಿಲಗೊಳಿಸುವ ಸಮಯ ಇನ್ನೂ ಬಂದಿಲ್ಲ. ಒಂದು ಚಿಕ್ಕ ಅಸಡ್ಡೆಯೂ ಮತ್ತೆ ಜಿಲ್ಲೆಯಲ್ಲಿ ತನ್ನ ಇರವನ್ನು ತೋರಿಸಲು ಕೋವಿಡ್ ವೈರಸ್‌ಗೆ ದಾರಿಯಾದೀತು ಎಂದು ಅವರು ಎಚ್ಚರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss