Thursday, July 7, 2022

Latest Posts

ಕಾಸರಗೋಡು| ಸತತ ಎಂಟನೇ ದಿನವಾದ ಶುಕ್ರವಾರವೂ ಕೊರೋನಾ ಸೋಂಕು ಪತ್ತೆಯಿಲ್ಲ

ಕಾಸರಗೋಡು: ಜಿಲ್ಲೆಯಲ್ಲಿ ಸತತ ಎಂಟನೇ ದಿನವಾದ ಶುಕ್ರವಾರವೂ ಕೊರೋನಾ ಸೋಂಕು ದೃಢಪಟ್ಟಿಲ್ಲ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕೇವಲ ಒಂದು. 177 ಮಂದಿ ಸೋಂಕಿತರು ಗುಣಮುಖರಾಗಿ ಜಿಲ್ಲೆಯ ವಿವಿಧ ಆಸ್ಪತ್ರೆ ಗಳಿಂದ ಬಿಡುಗಡೆಗೊಂಡಿದ್ದಾರೆ.
ಈ ಮಧ್ಯೆ ಗುರುವಾರ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದರು. ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೋಂಕಿತ ಕೊನೆಯ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದು, ಈ ರೋಗಿ ಗುಣಮುಖರಾಗಿ ಹೊಸ ಸೋಂಕು ದೃಢಪಡದಿದ್ದಲ್ಲಿ ಕಾಸರಗೋಡು ಜಿಲ್ಲೆ ಕೊರೋನಾ ಮುಕ್ತವಾಗಲಿದೆ.
ಇದೇ ವೇಳೆ ನಿಗಾದಲ್ಲಿರುವವರ ಸಂಖ್ಯೆ ಒಂದು ಸಾವಿರಕ್ಕಿಂತ ಕೆಳಗೆ ಇಳಿಕೆಯಾಗಿದೆ. ಇನ್ನೀಗ ಜಿಲ್ಲೆಯಲ್ಲಿ 976 ಮಂದಿ ನಿಗಾದಲ್ಲಿದ್ದು, ಈ ಪೈಕಿ 29 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. 227 ಮಂದಿಯ ಸ್ಯಾಂಪಲ್ ವರದಿ ಲಭಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss