ಹೊಸ ದಿಗಂತ ಆನ್ಲೈನ್ ಡೆಸ್ಕ್:
ಸ್ಥಳಿಯಾಡಳಿತ ಚುನಾವಣೆಗಳಿಗೆ ಸಜ್ಜಾಗುತ್ತಿರುವ ಕಾಸರಗೊಡು ಜಿಲ್ಲೆಯಲ್ಲಿ ಸ್ಟ್ರಾಂಗ್ ರೂಮ್ ಸಿದ್ಧತೆಗಳನ್ನು ಪರಿಶೀಲಿಸಲು ಖುದ್ದು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಭೇಟಿ ನೀಡಿದ್ದಾರೆ.
ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಈ ಬಾರಿ ಸ್ಟ್ರಾಂಗ್ ರೂಮ್ ಏರ್ಪಾಡು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಡಿ. ಶಿಲ್ಪಾ, ಕಾಸರಗೊಡು ಬ್ಲಾಕ್ ಪಂಚಾಯತ್ ಅಧಿಕಾರಿ ವಿ.ಜೆ. ಸಂಶುದ್ದೀನ್, ಅನುಪಂ ಜೊತೆಗೆ ಭೇಟಿ ನೀಡಿದ ಅವರು ಅಲ್ಲಿ ನಡೆದಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡಿದ್ದಾರೆ.
ಮತದಾನದ ಬಳಿಕ ಇಲ್ಲಿ ಮತಯಂತ್ರಗಳನ್ನು ಇಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳೂ ಭರದಿಂದ ಸಾಗುತ್ತಿದೆ.