Tuesday, June 28, 2022

Latest Posts

ಕಾಸರಗೋಡು| ಹಿಂಬಾಗಿಲ ನೇಮಕಾತಿಗೆ ಪಿಎಸ್ ಸಿ ಬೆಂಬಲ ಆರೋಪಿಸಿ ಯುವಮೋರ್ಚಾ ಪ್ರತಿಭಟನೆ

ಕಾಸರಗೋಡು: ಅಕ್ರಮವಾಗಿ ಹಿಂಬಾಗಿಲ ನೇಮಕಾತಿಗೆ ಕೇರಳ ಲೋಕ ಸೇವಾ ಆಯೋಗ (ಪಿಎಸ್ ಸಿ)ವು
ಕೈಜೋಡಿಸುತ್ತದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದರು.
ಭಾರತೀಯ ಜನತಾ ಯುವಮೋರ್ಚಾದ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ಪಿಎಸ್ ಸಿ ಕಚೇರಿಗೆ ನಡೆಸಿದ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಂಕ್ ಲಿಸ್ಟ್ ನಲ್ಲಿ ಉದ್ಯೋಗಾರ್ಥಿಗಳಿದ್ದರೂ ಈ ಕೋವಿಡ್ ಕಾಲದಲ್ಲಿ ತಾತ್ಕಾಲಿಕ ನೇಮಕ ಮಾಡಲಾಗಿದೆ. ಆಡಳಿತ ಪಕ್ಷದ ಕಾರ್ಯಕರ್ತರನ್ನು ಈ ರೀತಿ ನೇಮಕಾತಿ ಮಾಡಲಾಗುತ್ತಿದೆ. ಈ ಮೂಲಕ ಹಿಂಬಾಗಿಲ ನೇಮಕ ನಡೆಸಿ ಯುವಜನರಿಗೆ ರಾಜ್ಯದ ಎಡರಂಗ ಸರಕಾರವು ಸವಾಲೊಡ್ಡಿದೆ ಎಂದು ಅವರು ದೂರಿದರು. ರಾಂಕ್ ಲಿಸ್ಟ್ ನಲ್ಲಿ ಇರುವವರನ್ನು ಕೂಡಲೇ ನೇಮಕ ಮಾಡಬೇಕು ಅಥವಾ ರಾಂಕ್ ಲಿಸ್ಟ್ ನ ಕಾಲಾವಧಿ ಹೆಚ್ಚಿಸಬೇಕು ಎಂದವರು ಆಗ್ರಹಿಸಿದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಂಜು ಜೋಸ್ಟಿ , ಜಿತೇಶ್, ಜಯರಾಜ್ ಶೆಟ್ಟಿ ಮುಂತಾದವರು ಮಾತನಾಡಿದರು. ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಶಾಖ್ ಕೇಳೋತ್ ಸ್ವಾಗತಿಸಿ, ಕಾರ್ಯದರ್ಶಿ ಸಾಗರ್ ತೆಕ್ಕೇಕೆರೆ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss