ಅಡುಗೆ ಮನೆಯಲ್ಲಿ ತುಂಬಾ ಡಬ್ಬಿಗಳಿರುತ್ತವೆ.ಪ್ರತಿಯೊಂದು ಸಾಮಾಗ್ರಿಗೂ ಒಂದು ಡಬ್ಬಿ ಬೇಕೇ ಬೇಕು. ಆದರೆ ಸಮಯಕ್ಕೆ ಸರಿಯಾಗಿ ಮಾತ್ರ ಯಾವ ಡಬ್ಬಿಯೂ ಸಿಗುವುದಿಲ್ಲ. ಸಕ್ಕರೆ ಉಪ್ಪ ಇಂಥ ಡಬ್ಬಗಳನ್ನು ಬಿಟ್ಟು ಉಳಿದ ಡಬ್ಬಿಗಳಲ್ಲಿ ಏನಿದೆ ಎಂದು ಮರೆತು ಹೋಗುತ್ತದೆ. ಅದಕ್ಕೆ ಇಲ್ಲಿದೆ ಕೆಲ ಉಪಯೋಗಕರ ಟಿಪ್ಸ್..
ಪಾರದರ್ಶಕ ಡಬ್ಬಿ: ಆದಷ್ಟು ಡಬ್ಬಿಗಳು ಪಾರದರ್ಶಕವಾಗಿರಲಿ. ಇದರಿಂದ ಎಲ್ಲವೂ ಕಣ್ಣೆದುರಿಗೇ ಇರುತ್ತದೆ. ಈಸಿಯಾಗಿ ನೀವು ಆರಿಸಬಹುದು.
ಸ್ಟೀಲ್ ಡಬ್ಬಿ ಮೇಲೆ ಹೆಸರು: ಹುಣಸೆಹಣ್ಣು,ಸ್ನಾಕ್ಸ್,ಮಸಾಲಾ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಡಲು ಆಗುವುದಿಲ್ಲ. ಆಗ ಪೇಪರ್ನಲ್ಲಿ ಹೆಸರು ಬರೆದು ಡಬ್ಬಿಗೆ ಅಂಟಿಸಿ. ಇದರಿಂದ ಮನೆಯಲ್ಲಿ ಬೇರೆಯವರು ಅಡುಗೆ ಮಾಡಲು ಸುಲಭವಾಗುತ್ತದೆ.