Thursday, July 7, 2022

Latest Posts

ಕಿಟಕಿ ಪಕ್ಕದಲ್ಲಿ ಚಾರ್ಜ್ ಹಾಕಿದ್ದ ಮೊಬೈಲ್ ಕಳ್ಳತನ: ಆರೋಪಿ ಬಂಧನ

ಹೊಸ ದಿಗಂತ ವರದಿ, ಮೈಸೂರು:

ಮೊಬೈಲ್ ಕಳ್ಳನನ್ನು ಬಂಧಿಸಿರುವ ಸರಸ್ವತಿಪುರಂ ಠಾಣೆಯ ಪೊಲೀಸರು 70 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಕೆ.ಜಿ.ಕೊಪ್ಪಲಿನ ಅಕ್ಷಯ್(19) ಬಂಧಿತ ಆರೋಪಿ.
ಮೈಸೂರಿನ ಕುವೆಂಪುನಗರದ ನಿವಾಸಿಯೊಬ್ಬರು ರಾತ್ರಿ ಎರಡು ಫೋನ್ ಗಳನ್ನು ಕಿಟಕಿ ಪಕ್ಕದಲ್ಲಿ ಚಾರ್ಜ್ ಮಾಡಲು ಇಟ್ಟು ಮಲಗಿದ್ದಾರೆ. ಬೆಳಗ್ಗೆ ಎದ್ದು ನೋಡಲಾಗಿ ಕಿಟಕಿ ತೆರೆದಿದ್ದು, ಮೊಬೈಲ್ ಫೋನ್ ಗಳು ಕಳ್ಳತನವಾಗಿತ್ತು. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಸರಸ್ವತಿಪುರಂ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಕಿಟಕಿಯ ಮೂಲಕ ಕೈ ಹಾಕಿ ಮೊಬೈಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 70ಸಾವಿರ ರೂ. ಮೌಲ್ಯದ ಓನ್ ಪ್ಲಸ್ 7 ಪ್ರೋ ಮತ್ತು ಒನ್ ಪ್ಲಸ್ ನಾರ್ಡ್ ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss