Monday, July 4, 2022

Latest Posts

ಕಿಡ್ನಿಸ್ಟೋನ್ಸ್ ನ ಲಕ್ಷಣಗಳು ನಿಮ್ಮಲ್ಲೂ ಕಂಡುಬಂದರೆ ಶೀಘ್ರ ವೈದ್ಯರನ್ನು ಸಂಪರ್ಕಿಸಿ,ಇಲ್ಲವಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾದೀತು!

ಅತೀ ಕಡಿಮೆ ನೀರು ಕುಡಿದರೆ ನೂರಾರು ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಕಿಡ್ನಿ‌ಸ್ಟೋನ್ಸ್ ನಂಥ ಸಮಸ್ಯೆಗೆ ನೀರು ಕುಡಿಯದೇ ಇರುವುದು ಒಂದು ಕಾರಣ. ದೇಹದ ಒಳಗೆ ಉಪ್ಪಿನ ಅಂಶ ಹಾಗೂ ಮಿನರಲ್ಸ್ ನ ಸಣ್ಣ ಕಲ್ಲುಗಳಾಗುತ್ತವೆ. ಇವು ಕ್ಯಾಲ್ಶಿಯಂ ಅಥವಾ ಯೂರಿಕ್ ಆಸಿಡ್ ನಿಂದ ಮಾಡಿರಲ್ಪಟ್ಟಿರುತ್ತವೆ. ಕಿಡ್ನಿಯ ಒಳಗೆ ಇವುಗಳ ಜನನವಾದರೂ ಸ್ವಲ್ಪ ದೂರ ಕಿಡ್ನಿ ಒಳಗೆ ಇವು ಓಡಾಡಬಲ್ಲವು‌. ತುಂಬಾ ಸಣ್ಣ ಕಲ್ಲು ಇದ್ದರೆ ತುಂಬಾ ನೀರು ಕುಡಿದು ಹಾಗೆಯೇ ಸರಿ ಮಾಡಿಕೊಳ್ಳಬಹುದು. ಇಲ್ಲವಾದರೆ ಲೇಸರ್, ಆಪರೇಶನ್ ಇದೆ. ಕಿಡ್ನಿ ಸ್ಟೋನ್ಸ್ ಆದರೆ ಯಾವ ರೀತಿ ಲಕ್ಷಣಗಳು ಪತ್ತೆಯಾಗುತ್ತವೆ ನೋಡಿ..

  • ಬೆನ್ನು,‌ಹೊಟ್ಟೆ ಅಥವಾ ಹೊಟ್ಟೆಯ ಸೈಡ್ ಭಾಗದಲ್ಲಿ ವಿಪರೀತ ನೋವು
  • ಮೂತ್ರ ವಿಸರ್ಜನೆ ವೇಳೆ ತುಂಬಾ ಉರಿ, ನೋವು
  • ಯಾವಾಗಲೂ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು.
  • ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ರಕ್ತ ಕಾಣಿಸುತ್ತದೆ.
  • ಮೂತ್ರ ತುಂಬಾ ವಾಸನೆಯಿಂದ ಕೂಡಿರುವುದು.
  • ಕಡಿಮೆ‌ ಮೂತ್ರ ವಿಸರ್ಜನೆ.
  • ತಲೆಸುತ್ತು ಹಾಗೂ ವಾಂತಿ ಬರುವಂತಾಗುವುದು.
  • ಚಳಿ ಜ್ವರ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss