Thursday, June 30, 2022

Latest Posts

ಕಿಡ್ನಿ ವೈಫಲ್ಯ: ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ

ಹೊಸದಿಗಂತ ವರದಿ,ಬಂಟ್ವಾಳ:

ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಕೃಷ್ಣ ಕುಲಾಲ್ ಅವರ ಕಿರಿಯ ಸಹೋದರಿ ಜಯಂತಿ (37) ಅವರು ಕಳೆದ ಐದು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ರೋಗ ಉಲ್ಬಣಿಸಿ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ತಂಗಿಯ ಆರೋಗ್ಯ ಕಾಪಾಡುವುದರ ಜೊತೆಗೆ ಆಸ್ಪತ್ರೆಯ ಬಿಲ್ ಪಾವತಿಸುವುದೇ ಕೃಷ್ಣ ಕುಲಾಲ್ ಅವರಿಗೆ ಪರದಾಡುವಂತಾಯಿತು. ಇದೀಗ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡುವಂತೆ ವೈದ್ಯರು ಸೂಚಿಸಿದ್ದು, ಈ ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ.

ಕೃಷ್ಣ ಕುಲಾಲ್‌ರಿಗೆ ನಾಲ್ಕು ಮಂದಿ ಸಹೋದರಿಯರು. ಬಡತನದ ಕಾರಣಕ್ಕಾಗಿ ಮೂರು ಮಂದಿ ಸಹೋದರಿಯರ ಸಹಿತ ತಾನೂ ಅವಿವಾಹಿತನಾಗಿರುವ ಇವರಿಗೆ ಜೀವನ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪೈಂಟಿಂಗ್ ಸಹಾಯಕರಾಗಿ ದುಡಿಯುವ ಇವರಿಗೆ ಸಿಗುವ ಅತ್ಯಲ್ಪ ಸಂಬಳ ಹಾಗೂ ಸಹೋದರಿಯರು ಬೀಡಿ ಕಟ್ಟಿ ಬರುವ  ಸಣ್ಣ ಮೊತ್ತದಿಂದ ಕಷ್ಟದಲ್ಲೇ ದಿನ ದೂಡುತ್ತಿದ್ದಾರೆ.
ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ವೈದ್ಯಕೀಯ ವೆಚ್ಚ ಭರಿಸುವುದು ಬಡ ಕುಟುಂಬಕ್ಕೆ ಸವಾಲಾಗಿ ಪರಿಣಮಿಸಿದೆ. ಸಮಾಜದ ಬಂಧುಗಳು ಮಾನವೀಯ ನೆಲೆಯಲ್ಲಿ ತಮ್ಮಿಂದಾಗುವ ಧನ ಸಹಾಯವನ್ನು ಮಾಡಿದ್ದಲ್ಲಿ ತನ್ನ ತಂಗಿಗೆ ಡಯಾಲಿಸಿಸ್ ಮಾಡಿಸಿ ಮುಂದಿನ ಚಿಕಿತ್ಸೆ ಕೊಡಿಸಲು ಸಾಧ್ಯ ಎಂದು ಕೃಷ್ಣ ಕುಲಾಲ್ ವಿನಂತಿಸಿಕೊಂಡಿದ್ದಾರೆ.

ನೀವು ನೆರವಾಗುವಿರಾ…
ಜಯಂತಿಯವರಿಗೆ ಆರ್ಥಿಕ ನೆರವು ನೀಡುವ ದಾನಿಗಳು ಅಥವಾ ಸಂಘ ಸಂಸ್ಥೆಗಳು ಜಯಂತಿ, ಕೆನರಾ ಬ್ಯಾಂಕ್ ಬೋಳ್ಯಾರ್ ಶಾಖೆ ಖಾತೆ ಸಂಖ್ಯೆ:8802101000175, ಐಎಫ್‌ಎಸ್‌ಸಿ ಕೋಡ್: CNRB 0008802 ಅಥವಾ ಗೂಗಲ್ ಪೇ:8861892106 ಜಮಾ ಮಾಡುವಂತೆ, ಹೆಚ್ಚಿನ ಮಾಹಿತಿಗಾಗಿ ಕೃಷ್ಣ ಕುಲಾಲ್ ಅವರ ದೂರವಾಣಿ 9743787021 ಸಂಪರ್ಕಿಸುವಂತೆ ಕೋರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss