Sunday, August 14, 2022

Latest Posts

ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ಸುಳಿವು ಕೊಟ್ಟ ರಕ್ಷಿತ್ ಶೆಟ್ಟಿ!

ಬೆಂಗಳೂರು :  ರಕ್ಷಿತ್ ಶೆಟ್ಟಿ  ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದ ‘ಕಿರಿಕ್ ಪಾರ್ಟಿ’ ಸಿನಿಮಾ ಪ್ರೇಕ್ಷಕರನ್ನು ಮೋಡಿಗೊಳಿಸಿತ್ತು. ಸಿನಿಮಾದಲ್ಲಿದ್ದ ಹಾಸ್ಯದ ಜೊತೆಗೆ  ಪ್ರೇಮಕತೆ ಪ್ರೇಕ್ಷಕರನ್ನು ಫಿದಾಗೊಳಿಸಿತ್ತು. ಆದರೆ  ಇದೀಗ ಈ  ಸಿನಿಮಾ  ಬರುತ್ತಿದೆ. ಹಾಗಂತ  ಇದು  ರೀ-  ರಿಲೀಸ್  ಆಗುತ್ತಿದೆ ಅಂದ್ಕೋಬೇಡಿ. ಬದಲಾಗಿ ಈ  ಚಿತ್ರದ  ಸೀಕ್ವೆಲ್  ಆಗಿ ಬರುತ್ತಿದೆ.

ಹೌದು, ಕಿರಿಕ್ ಪಾರ್ಟಿ 2 ಸಿನಿಮಾವನ್ನು ರಿಷಬ್ ಶೆಟ್ಟಿಯೇ ನಿರ್ದೇಶಿಸುತ್ತಾರಂತೆ. ಸಿನಿಮಾದ ನಾಯಕನಾಗಿ ರಕ್ಷಿತ್ ಶೆಟ್ಟಿ ಮುಂದುವರಿಯುತ್ತಾರೆ .  ಉಳಿದ ತಾರಾಗಣವು ಉಳಿದುಕೊಳ್ಳುವ ಸಾಧ್ಯತೆ ಇದೆ. ಆದರೆ  ಈಗ  ಈ  ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇರ್ತಾರೋ?  ಇಲ್ವೋ  ಎಂಬ  ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಹುಟ್ಟಿಕೊಂಡಿದೆ. ಇದಕ್ಕೆಲ್ಲ ಚಿತ್ರತಂಡ ಮುಂದಿನ ದಿನಗಳಲ್ಲಿ ಉತ್ತರ ನೀಡಬೇಕಿದೆ.

ಕಿರಿಕ್ ಪಾರ್ಟಿ 2′  ಕಥೆ  ರೆಡಿಯಾಗುತ್ತಿದ್ದು, ರಕ್ಷಿತ್ ಶೆಟ್ಟಿ ಪುಣ್ಯಕೋಟಿ ಸಿನಿಮಾದ  ಪ್ರೀ ಪ್ರೊಡಕ್ಷನ್ ಕೆಲಸದ ಮೇಲೆ ಗಮನಹರಿಸುತ್ತಿದ್ದು , ಆ ನಂತರ ಕಿರಿಕ್ ಪಾರ್ಟಿ 2 ಸಿನಿಮಾ ಪ್ರಾರಂಭವಾಗುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss