ಹೊಸದಿಗಂತ ಆನ್ಲೈನ್ ಡೆಸ್ಕ್:
ಕಿವಿ ಕೇಳದ ಮಾತು ಬಾರದ 15 ವರ್ಷದ ಬಾಲಕಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಬಿಹಾರದ ಮಧುಬನಿ ಜಿಲ್ಲೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆ ಕಣ್ಣಿಗೆ ಹರಿತವಾದ ಆಯುಧದಿಂದ ಹಾನಿ ಮಾಡಿದ್ದಾರೆ.
ಆಕೆಯ ಕಣ್ಣುಗಳು ದೃಷ್ಟಿ ಕಳೆದುಕೊಂಡಿದೆಯೋ ಇಲ್ಲವೊ ಇನ್ನೂ ತಿಳಿದುಬಂದಿಲ್ಲ. ಮೇಯಲು ಹೋಗಿದ್ದ ಮೇಕೆಯನ್ನು ಕರೆತರುವಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೇರೆ ಮಕ್ಕಳೊಡನೆ ಸೇರಿ ಈಕೆಯೂ ಮೇಕೆ ಕರೆದುಕೊಂಡು ಬರಲು ಹೋಗಿದ್ದು, ಅಲ್ಲಿ ಕಾಮುಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಜೊತೆಯಲ್ಲಿಯೇ ಹೋಗಿದ್ದ ಇನ್ನೊಬ್ಬ ಬಾಲಕಿ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.