Friday, January 22, 2021

Latest Posts

ಕಿಸಾನ್ ಸಮ್ಮಾನ್ ನಿಧಿ: 7ನೇ ಕಂತು ರೈತರ ಖಾತೆಗೆ ವರ್ಗಾವಣೆಗೆ ಸಿದ್ಧತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರೈತರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರ ಆರಂಭಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ತಲಾ ೨೦೦೦ ರೂ.ಮೊತ್ತದ ಏಳನೇ ಕಂತು ಶೀಘ್ರವೇ ರೈತರ ಖಾತೆಗಳಿಗೆ ಜಮೆಯಾಗಲಿದೆ. ಇದಕ್ಕಾಗಿ ಕೇಂದ್ರ ಸರಕಾರ ಈಗ ಸಿದ್ಧತೆಗಳನ್ನು ನಡೆಸುತ್ತಿದೆ.
ಡಿ.೧ರಿಂದ ಈ ಯೋಜನೆಯ ೭ನೇ ಕಂತಿನ ಹಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಯೋಜನೆಯ ಎಲ್ಲ ಫಲಾನುಭವಿಗಳ ಖಾತೆಗೆ ೨೦೦೦ ರೂ. ಜಮೆಯಾಗಲಿದೆ. ಇದುವರೆಗೆ ೬ ಕಂತುಗಳನ್ನು ರೈತರಿಗೆ ನೀಡಲಾಗಿದೆ. ಯೋಜನೆಯಡಿ ದೇಶದ ೧೧.೧೭ ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆಯುತ್ತಿದ್ದು, ಇವರೆಲ್ಲರಿಗೂ ಕೇಂದ್ರ ಸರ್ಕಾರ ಸಹಾಯಧನ ನೀಡಿದೆ.
ರೈತರಿಗೆ ನೀಡಿದ ಮೊತ್ತ ೯೫೦೦೦ ಕೋ.ರೂ.
ಪ್ರತಿ ಹಣಕಾಸು ವರ್ಷದಲ್ಲಿ ಒಟ್ಟು ಮೂರು ಕಂತುಗಳಲ್ಲಿ ತಲಾ ೨೦೦೦ ರೂ.ಗಳಂತೆ ಒಟ್ಟು ೬೦೦೦ ರೂ.ಗಳನ್ನು ನೀಡಲಾಗುತ್ತದೆ. ಮೊದಲ ಕಂತು ಡಿ.೧ ರಿಂದ ಮಾ. ೩೧ ರ ನಡುವೆ ಬರುತ್ತದೆ. ಎರಡನೇ ಕಂತು ಏ.೧ ರಿಂದ ಜು.೩೧ ರವರೆಗೆ ಮತ್ತು ಮೂರನೇ ಕಂತು ಆ.೧ ರಿಂದ ನ.೩೦ ರ ನಡುವೆ ಬರುತ್ತದೆ. ಫಲಾನುಭವಿಗಳ ದಾಖಲೆಗಳೆಲ್ಲ ಸರಿಯಾಗಿದ್ದಲ್ಲಿ ಎಲ್ಲಾ ೧೧.೧೭ ಕೋಟಿ ನೋಂದಾಯಿತ ರೈತರಿಗೂ ಏಳನೇ ಕಂತಿನ ಲಾಭ ಸಿಗಲಿದೆ.ಕೇಂದ್ರ ಸರಕಾರ ಈ ರೈತಪರ ಯೋಜನೆಗಾಗಿ ಈ ವರೆಗೆ ೯೫ಸಾವಿರ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಿದೆ.
ಕೃಷಿ ಇಲಾಖೆ ಮಾಹಿತಿಯಂತೆ ಅರ್ಜಿ ಸಲ್ಲಿಸಿದ ೧.೩ ಕೋಟಿ ರೈತರು ಸರಿಯಾದ ದಾಖಲೆ ಸಲ್ಲಿಸದ ಕಾರಣ ಹಣ ಪಾವತಿಯಾಗಿಲ್ಲ. ತಪ್ಪು ದಾಖಲಾತಿ ಹಾಗೂ ಆಧಾರ್ ಕಾರ್ಡ್ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.ಆದಾಗ್ಯೂ ಇಂತಹ ರೈತರಿಗೆ ಮತ್ತೆ ಸರಿಯಾದ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಹಣ ಪಾವತಿ ಆಗದಿದ್ದಲ್ಲಿ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಧಿಕೃತ [email protected] ಗೆ ಲಾಗಿನ್ ಆಗಿ ಸರಿಪಡಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಿದ್ದು, ಆಧಾರ್ ಸರಿಯಾಗಿ ಅಪ್‌ಲೋಡ್ ಮಾಡದಿದ್ದರೆ ಅಥವಾ ಕೆಲವು ಕಾರಣಗಳಿಂದಾಗಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಲ್ಲಿ ಮಾಹಿತಿ ಸಿಗುತ್ತದೆ. ಇಲ್ಲಿಯೇ ನೀವು ಯೋಜನೆಗೆ ಹೆಸರು ನೋಂದಾಯಿಸಬಹುದು.
ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೦೧೧ ೨೩೩೮೧೦೯೨,೨೩೩೮೨೪೦೧, ಟೋಲ್ ಫ್ರೀ ನಂ.೧೮೦೦೧೧೫೫೨೬೬, ಪಿಎಂ ಕಿಸಾನ್ ಸಹಾಯವಾಣಿ ನಂ.೧೫೫೨೬೧ನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!