Friday, August 19, 2022

Latest Posts

ಕುಂಬಡಾಜೆ ಪಂಚಾಯತ್ ನ ವಿವಿಧೆಡೆ ಗುಡ್ಡ ಕುಸಿತ ಭೀತಿ: ಆಲಿಂಜ ಪರಿಸರದಲ್ಲಿ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ

ಬದಿಯಡ್ಕ: ಕುಂಬಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಿಂಜ ಸಮೀಪದ ಆಲಿಂಜ ಪರಿಸರದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು ಸುಮಾರು ಒಂದು ಗಂಟೆಯ ತನಕ ರಸ್ತೆ ಸಂಚಾರ ಸ್ಥಗಿತಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ತಕ್ಷಣ ಆಗಮಿಸಿದ ಊರವರ ಸಹಕಾರದಿಂದ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ.
ಅಲ್ಲದೆ ಬಿರುಸಿನ ಮಳೆಯಿಂದಾಗಿ ಬೆಳಿಂಜ ಹಾಗೂ ಆಲಿಂಜ ಪರಿಸರದಲ್ಲಿ ಹಲವಾರು ಕಡೆಗಳಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಜೊತೆಗೆ ಕುಂಬಡಾಜೆ ಪಂಚಾಯತ್ ನ ಇನ್ನಷ್ಟು ಪ್ರದೇಶಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಂಚರಿಸುವಾಗ ಗರಿಷ್ಠ ಎಚ್ಚರಿಕೆ ವಹಿಸಬೇಕಾಗಿದೆ. ಇದೇ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕ ವಲಯ ಆಗ್ರಹಿಸಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!