ಹೊಸ ದಿಗಂತ ವರದಿ, ಕಾಸರಗೋಡು:
ಗ್ರಾಮೀಣ ಪ್ರದೇಶಗಳ ಸಾರ್ವಜನಿಕ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ನಾಗರಿಕರು ಕೈಜೋಡಿಸುವ ಮೂಲಕ ಬದಲಾವಣೆಯ ಹೊಸ ಪರ್ವಕ್ಕೆ ಮುಂದಾಗಬೇಕು. ಎಲ್ಲವನ್ನೂ ಸರಕಾರವೇ ಮಾಡಬೇಕೆಂಬ ಕಲ್ಪನೆ ಬದಲಾಗಬೇಕು ಎಂದು ಮಧುರೈ ಕಾಮರಾಜ ವಿ.ವಿ.ಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ತಿಳಿಸಿದರು.
ಕುಂಬಳೆ ಪ್ರದೇಶದ ಸಹೃದಯ ಸಾರ್ವಜನಿಕರು ಜೊತೆಯಾಗಿ ಆರಿಕ್ಕಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡಮಾಡಿದ |
320 ಲೀಟರ್ ಗಳ ಶೈತಲೀಕರಣ ಯಂತ್ರವನ್ನು (ಪ್ರೀಝರ್ ) ಆಸ್ಪತ್ರೆಯ ಹಿರಿಯ ವೈದ್ಯ ಡಾ.ಕೆ.ಎಸ್.ಗಟ್ಟಿ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ, ಸಾಹಿತಿ ವಿ.ಬಿ.ಕುಳಮರ್ವ, ವೆಂಕಟರಾಜ ಕಬೆಕ್ಕೋಡು ಉಪಸ್ಥಿತರಿದ್ದು ಶುಭಾಶಂಸನೆಗೈದರು. ಸಹಾಯಕ ದಾದಿ ರಹಮತ್, ಕಿರಿಯ ಆರೋಗ್ಯ ಪರಿವೀಕ್ಷಕ ವಿವೇಕ್, ಫಾರ್ಮಸಿಸ್ಟ್ ಶ್ರೀಕಲಾ, ಉದ್ಯೋಗಿ ಚಂದ್ರನ್, ವೆಂಕಟರಮಣ ಕೆ.ಕೆ., ವೆಂಕಟರಾಜ ಮೂಡುಕೋಣಮ್ಮೆ ಮೊದಲಾದವರು ಭಾಗವಹಿಸಿದ್ದರು. ವೈದ್ಯಾಧಿಕಾರಿ ಡಾ.ಕೆ.ಎಸ್.ಗಟ್ಟಿ ಸ್ವಾಗತಿಸಿ, ಆಸ್ಪತ್ರೆಯ ಉದ್ಯೋಗಿ ರಮೇಶ ವಂದಿಸಿದರು.