Thursday, June 30, 2022

Latest Posts

ಕುಂಬಳೆ ಕುಂಟಂಗೇರಡ್ಕದ ಇಬ್ಬರು ಯುವಕರು ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಕುಂಬಳೆ ಸಮೀಪದ ನಾಯ್ಕಾಪಿನಲ್ಲಿ ಸೋಮವಾರ ರಾತ್ರಿ ಯುವಕನೋರ್ವನ ಬರ್ಬರ ಹತ್ಯೆಯ ಬೆನ್ನಿಗೆ ಮಂಗಳವಾರ ಸಂಜೆ ಕುಂಬಳೆ ಪರಿಸರದಲ್ಲಿ ಇಬ್ಬರು ಯುವಕರು ಆತ್ಮಹತ್ಯೆಗೈದ ಘಟನೆ ನಡೆದಿದ್ದು ಇಡೀ ನಾಡು ಬೆಚ್ಚಿ ಬೀಳುವಂತಾಗಿದೆ.
ಕುಂಬಳೆ – ಬದಿಯಡ್ಕ ರಸ್ತೆಯ ಪೆಟ್ರೋಲ್ ಪಂಪ್ ಸಮೀಪದ ಕುಂಟಂಗೇರಡ್ಕ ಕಾಲನಿ ನಿವಾಸಿಗಳಾದ ರೋಶನ್ (21) ಹಾಗೂ ಮಣಿ (19) ಎಂಬವರು ಆತ್ಮಹತ್ಯೆಗೆ ಶರಣಾದವರು. ಇವರಿಬ್ಬರು ಶೇಡಿಗುಮ್ಮೆ ಪ್ರದೇಶದ ಕಾಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಯ್ಕಾಪಿನಲ್ಲಿ ಸೋಮವಾರ ರಾತ್ರಿ ಕೊಲ್ಲಲ್ಪಟ್ಟ ಹರೀಶ್ (34) ಅವರ ಹತ್ಯೆಗೈದ ಘಟನೆಗೆ ಸಂಬಂಧಿಸಿ ಓರ್ವನ ಮೇಲೆ ಪೊಲೀಸರು ನಿಗಾ ಇರಿಸಿದ್ದು , ರೋಶನ್ ಮತ್ತು ಮಣಿ ಆತನ ಸ್ನೇಹಿತರು ಆಗಿದ್ದಾರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕುಂಬಳೆ ಪೊಲೀಸರ ದಂಡು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss