ಕುಂಬಳೆ: ಬಿಎಂಎಸ್ ಕಾರ್ಯಕರ್ತರ ಮೇಲೆ ಸಿಪಿಎಂ ಗೂಂಡಾಗಳು ವಿನಾಕಾರಣ ಆಕ್ರಮಣ ನಡೆಸಿ ಮಾರಣಾಂತಿಕ ಹಲ್ಲೆ ಮಾಡಿದ ಹೇಯ ಘಟನೆ ಕುಂಬಳೆ ಸಮೀಪದ ನಾರಾಯಣ ಮಂಗಲ ಪರಿಸರದಲ್ಲಿ ಬುಧವಾರ ರಾತ್ರಿ ನಡೆದಿದೆ. ಬಿಎಂಎಸ್ ಕಾರ್ಯಕರ್ತರಾದ ಅಜಿತ್ ಕುದ್ರೆಪ್ಪಾಡಿ ಹಾಗೂ ಪ್ರಿಯೇಶ್ ನಾಯ್ಕಾಪು ಅವರು ಹಲ್ಲೆಗೊಳಗಾದವರು.
ಮಾರಣಾಂತಿಕ ಹಲ್ಲೆಗೊಳಗಾದ ಅಜಿತ್ ರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮತ್ತು ಪ್ರಿಯೇಶ್ ರನ್ನು ಕಾಸರಗೋಡು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಮಧ್ಯೆ ಮಾರಣಾಂತಿಕ ಹಲ್ಲೆ ಘಟನೆಯನ್ನು ಖಂಡಿಸಿ ಹಾಗೂ ಸಿಪಿಎಂನ ಗೂಂಡಾ ಪ್ರವೃತ್ತಿಯ ವಿರುದ್ಧ ಗುರುವಾರ (ಇಂದು) ಸಂಜೆ 5 ಗಂಟೆಗೆ ಕುಂಬಳೆಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕುಂಬಳೆ ಶ್ರೀ ಜಯ ಮಾರುತಿ ವ್ಯಾಯಾಮ ಶಾಲೆಯಿಂದ ಪ್ರಾರಂಭಗೊಳ್ಳಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಅಸಂಖ್ಯಾತ ಮಂದಿ ಬಿಎಂಎಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ.