Tuesday, August 16, 2022

Latest Posts

ಕುಂಬಳೆ| ಮತದಾರರ ಪಟ್ಟಿಯಿಂದ ಬಿಜೆಪಿ ಕಾರ್ಯಕರ್ತರನ್ನು ಹೊರಹಾಕಲು ಷಡ್ಯಂತ್ರ: ಆರೋಪ

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ ನ ಮತದಾರರ ಪಟ್ಟಿಯಿಂದ ಬಿಜೆಪಿ ಕಾರ್ಯಕರ್ತರನ್ನು ಹೊರಹಾಕಲು ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳು ಷಡ್ಯಂತ್ರ ರೂಪಿಸಿವೆ ಎಂದು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ಸಭೆಯು ಆರೋಪಿಸಿದೆ. ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಹಾಕಲು ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಪ್ರಬಲ ಪ್ರತಿಭಟನೆ ಹಮ್ಮಿಕೊಳ್ಳಲು ಬಿಜೆಪಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕುಂಬಳೆ ಬಿಜೆಪಿ ಕಾರ್ಯಾಲಯದಲ್ಲಿ ಜರಗಿದ ಸಭೆಯನ್ನು ಕೇರಳ ರಾಜ್ಯ ಸಮಿತಿಯ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಉದ್ಘಾಟಿಸಿದರು. ಬಿಜೆಪಿ ಪಂಚಾಯತ್ ಸಮಿತಿಯ ಅಧ್ಯಕ್ಷ ಕೆ.ಸುಧಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮುರಳೀಧರ ಯಾದವ್, ಎಚ್.ಸತ್ಯಶಂಕರ ಭಟ್, ಮಧುಸೂದನ, ಕೆ.ವಿನೋದನ್ ಕಡಪ್ಪುರ, ಶಶಿ ಕುಂಬಳೆ, ಸುಬ್ರಹ್ಮಣ್ಯ ನಾಯಕ್, ಪ್ರದೀಪ್, ಕೆ.ಸುಜಿತ್ ರೈ , ಪ್ರೇಮಲತಾ ಮುಂತಾದವರು ಮಾತನಾಡಿದರು. ಅಜಿತ್ ಕುಮಾರ್ ಸ್ವಾಗತಿಸಿ, ರಾಜೇಶ್ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss