Thursday, August 11, 2022

Latest Posts

ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ: ಮೃತ್ಯುಂಜಯ ಶ್ರೀ

ಹೊಸ ದಿಗಂತ ವರದಿ ಧಾರವಾಡ:

ಮಾಜಿ ಸಚಿವರಾದ ವಿನಯ ಕುಲಕರ್ಣಿ ಬಂಧನ ತೀವ್ರವಾಗಿ ಖಂಡಿಸುವೆ. ಅಲ್ಲದೇ, ಕುಲಕರ್ಣಿ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾಗಿ ಕೂಡಲಸಂಗಮದ ಬಸವ ಪೀಠದ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶುಕ್ರವಾರ ಬಾರಾಕೂಟ್ರಿನಲ್ಲಿನ ವಿನಯ ಕುಲಕರ್ಣಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಾತ್ಮಕ ಹೋರಾಟ ನಡೆದಿದೆ. ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಚನ್ನಮ್ಮ, ಬಸವಣ್ಣ, ಅಕ್ಕಮಹಾದೇವಿ, ಸಿದ್ಧಾರೂಢರ ಆಶೀರ್ವಾದ ವಿನಯ್ ಕುಟುಂಬದ ಮೇಲಿದೆ. ಅನ್ಯಾಯ ಆದಾಗ ಸಾಂತ್ವನ ಹೇಳಲಿಕ್ಕೆ ಯಾವುದೇ ಜಾತಿ, ಬೇಧ, ಮತ-ಪಂಥ ಲೆಕ್ಕಕ್ಕೆ ಬರುವುದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ಅನ್ಯಾಯ ಆದಾಗ ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸುವುದು ಮನುಜ ಧರ್ಮ. ವಿನಯ್ ಬಂಧನ ಹಿನ್ನಲೆ ಅವರ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಲು ಬಂದಿರುವುದಾಗಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss