Wednesday, August 10, 2022

Latest Posts

ಕುಡುಪುವಿನಲ್ಲಿ ಕೊರೋನಾ ಹೊಸ‌ ಕೇಸ್: ಸೀಲ್ ಡೌನ್ ಗೆ ಸಿದ್ಧತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ನೀರುಮಾರ್ಗ ಕುಟ್ಟಿಕಲ ನಿವಾಸಿ 40 ವರ್ಷದ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ಈ ಮಹಿಳೆ ಬೆಂಗಳೂರಿನಿಂದ ಮೇ 10ಕ್ಕೆ ಮಂಗಳೂರಿಗೆ ಬಂದಿದ್ದು, ಬುಧವಾರ ಈಕೆಗೆ ಸೋಂಕು ದೃಢ ಪಟ್ಟಿರುವುದರಿಂದ ಈಕೆ ವಾಸವಿದ್ದ ಕುಡುಪು ಪ್ರದೇಶದಲ್ಲಿ ಸೀಲ್ ಡೌನ್ ಗೆ ಸಿದ್ಧತೆ ಆರಂಭವಾಗಿದೆ. ಬೆಂಗಳೂರಿನಿಂದ ಬಂದಿದ್ದ ಈ ಮಹಿಳೆ ಕುಡುಪುವಿನಲ್ಲಿ ವಾಸವುದ್ದುದು ಅಲ್ಲದೆ ನೀರುಮಾರ್ಗ ಕುಟ್ಟಿಕಲಕ್ಕೂ ಆಗಾಗ ಹೋಗಿ ಬರುತ್ತಿದ್ದರು ಎನ್ನಲಾಗಿದೆ. ಇದು ಕ್ವಾರಂಟೈನ್ ಅಲ್ಲದ ಹೊಸ ಪ್ರಕರಣವಾಗಿರುವುದರಿಂದ ಸಹಜವಾಗಿಯೇ ಸ್ಥಳೀಯರಲ್ಲಿ ಆತಂಕ ಹೆಚ್ಚು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss