Wednesday, July 6, 2022

Latest Posts

ಕುಣಿಗಲ್ಲಿನಲ್ಲಿ ನ ಧನುಶ್ರೀ ಪೋಟೋ ಸ್ಟುಡಿಯೋ ಮಾಲಿಕ ಕೊಲೆ ಪ್ರಕರಣ: ಏಳು ಆರೋಪಿಗಳ ಬಂಧನ

ತುಮಕೂರು: ಕುಣಿಗಲ್ಲಿನಲ್ಲಿ ನ ಧನುಶ್ರೀ ಪೋಟೋ ಸ್ಟುಡಿಯೋ ಒಳಕ್ಕೆ ಅದರ ಮಾಲಿಕ ಪಾಂಡುರಂಗ ಎಂಬುವವರನ್ನು ಕೊಲೆ ಮಾಡಲು ಯತ್ನಿಸಿದ ಎಂಟು ಜನರ ಪೈಕಿ ಏಳು ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ವಕೀಲರಾಗಿದ್ದರು ಶಿವಪ್ರಸಾದ್ .ಎಸ್. ಮತ್ತು ಇತರರು ಮಾರಕಾಸ್ರಗಳು ಮತ್ತು ಮೆಣಸಿನ ಪುಡಿಯೊಂದಿಗೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸ್ಟುಡಿಯೋದಲ್ಲಿದ್ದ್ ಪಾಂಡುರಂಗ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ಗಲಾಟೆ ನೋಡಿ ಪಕ್ಕದ ಅಂಗಡಿಯವರು ಬಂದ ಪರಿಣಾಮ ಓಡಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕೇಸು ದಾಖಲಿಸಿದ್ದಾರೆ ಕುಣಿಗಲ್ಲಿನ ಪೊಲೀಸರು ಕೊನೆಗೆ ಸುಪಾರಿ ಕೊಟ್ಟಿದ್ದ ಬೆಂಗಳೂರಿನ ವಕೀಲರಾಗಿದ್ದರು ಶಿವಪ್ರಸಾದ್. ಎಸ್. ಬೆಂಗಳೂರಿನವರೇ ಆದ ಸುಪಾರಿ ಹಂತಕರಾದ ಸಾದಿಕ್,ಮೊಹಮ್ಮದ್ ಅಕ್ಬರ್, ಮೊಹಮ್ಮದ್ ಸೂದ್,ಶಾರುಕ್,ಮೌಲಾ, ಅರುಣಾ.ಕೆ. ಅವರುಗಳನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ಮಜ್ಜು ತಲೆಮರೆಸಿಕೊಂಡಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss