Monday, July 4, 2022

Latest Posts

ಕುತೂಹಲ ಮೂಡಿಸಿದ ಬಾಲಿವುಡ್ ನಟ ಅಕ್ಷಯ ಕುಮಾರ್, ಯೋಗಿ ಆದಿತ್ಯನಾಥ್ ಭೇಟಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್ ನಟ ಅಕ್ಷಯ ಕುಮಾರ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದು, ಇವರ ಈ ಭೇಟಿ ಎಲ್ಲೆಡೆ ಕೂತಹಲ ಮೂಡಿಸಿದೆ.

ಯೋಗಿ ಆದಿತ್ಯನಾಥ್ ಮತ್ತು ಅಕ್ಷಯ ಕುಮಾರ್ ಅಕ್ಕ-ಪಕ್ಕ ಕುಳಿತು ಮಾತನಾಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ. ಅಷ್ಟೇ ಅಲ್ಲದೇ ಸ್ವತ್ಃ ಯೋಗಿ ಆದಿತ್ಯನಾಥ್ ಅವರೇ ಅಕ್ಷಯ ಕುಮಾರ್ ಪಕ್ಕ ಕುಳಿತಿರುವ ಫೋಟೋವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೆಲಸದ ನಿಮಿತ್ತ ಮುಂಬೈಗೆ ಭೇಟಿಕೊಟ್ಟಿದ್ದ ಯೋಗಿ ಆದಿತ್ಯನಾಥ್, ಅಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿಗೆ ಅಕ್ಷಯ್ ಕುಮಾರ್ ಆಗಮಿಸಿ ಯೋಗಿ ಆದಿತ್ಯನಾಥ್”ರೊಂದಿಗೆ ಕೆಲ ಹೊತ್ತು ಸಮಯ ಕಳೆದಿದ್ದಾರೆ. ಮತ್ತು ಚಿತ್ರರಂಗದ ಬಗ್ಗೆ ಇಬ್ಬರೂ ಚರ್ಚೆ ನಡೆಸಿರುವುದಾಗಿ ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss