ಮಂಗಳೂರು: ಕುತ್ತಿಗೆಯಲ್ಲಿ ಹಗ್ಗ ಬಿಗಿಗೊಂಡು ಪ್ರಾಣಾಪಾಯಕ್ಕೆ ಸಿಲುಕಿದ್ದ ಹೋರಿಯನ್ನು ಮಂಗಳೂರಿನ ನವಮಂಗಳೂರು ಬಂದರು ಮಂಡಳಿ(ಎನ್ಎಂಪಿಟಿ)ಸಿಬ್ಬಂದಿ ರಕ್ಷಿಸಿದ್ದಾರೆ.
ಕಳೆದ ಫೆಬ್ರವರಿಯಿಂದ ಕುತ್ತಿಗೆಗೆ ಹಗ್ಗ ಬಿಗಿಗೊಂಡು ಹೋರಿಯೊಂದು ಒದ್ದಾಡುತ್ತಿತ್ತು. ಯಾರೊಬ್ಬರನ್ನೂ ಸ್ಪರ್ಶಿಸಲೂ ಬಿಡದೇ ವೇದನೆ ಅನುಭವಿಸುತ್ತಿದ್ದ ಹೋರಿಯ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಎನ್ಎಂಪಿಟಿ ಅಗ್ನಿಶಾಮಕದಳ ಸಿಬ್ಬಂದಿ ಭಾನುವಾರ ರಾತ್ರಿ ತುಂಡರಿಸಿ ಜೀವದಾನ ಮಾಡಿದ್ದಾರೆ.
ಎನ್ಎಂಪಿಟಿ ಸುತ್ತಲೂ ಓಡಾಡುತ್ತಿದ್ದ ಹೋರಿಯ ಕುತ್ತಿಗೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಹಗ್ಗ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಸುರತ್ಕಲ್, ಪಣಂಬೂರು ನಾಗರಿಕರು, ಎನಿಮಲ್ ಕೇರ್ ಟ್ರಸ್ಟ್ ಪ್ರತಿನಿಧಿಗಳು ಹೋರಿಯನ್ನು ಹಿಡಿಯಲು ಪ್ರಯತ್ನಿಸಿದ್ದರು. ಆದರೆ, ದಷ್ಟಪುಷ್ಟವಾಗಿ ಆಕ್ರಮಣಕಾರಿ ವರ್ತನೆ ಹೊಂದಿದ್ದ ಹೋರಿ ಯಾರ ಕೈಗೂ ಸಿಕ್ಕಿರಲಿಲ್ಲ. ಅದರ ಕುತ್ತಿಗೆಯಲ್ಲಿ ಹಗ್ಗ ಬಿಗಿಗೊಂಡು ಅದಕ್ಕೆ ಆಹಾರ ಸೇವನೆ ಮಾಡಲಾಗದ ಸ್ಥಿತಿ ಉಂಟಾಗಿತ್ತು.
ಶನಿವಾರ ಎನ್ಎಂಪಿಟಿ ಆವರಣ ಪ್ರದೇಶಿಸಿದ್ದ ಈ ಹೋರಿ ನೀರು ಕುಡಿಯಲು ಆಗಮಿಸಿತ್ತು. ಆಗ ಅದರ ಕುತ್ತಿಗೆಯಲ್ಲಿ ಹಗ್ಗ ಬಿಗಿದುಕೊಂಡಿರುವುದನ್ನು ಗಮನಿಸಿದ ಸಿಬ್ಬಂದಿ, ಅದನ್ನು ಹಿಡಿಯಲು ಯತ್ನಿಸಿದ್ದರು. ಆದರೆ ಅದು ಹಿಡಿಯಲು ಸಿಗದೆ ಆಕ್ರಮಣ ನಡೆಸಲು ಮುಂದಾಗಿತ್ತು.
ಕೊನೆಗೂ ಪ್ರಾಣಿ ದಯಾ ಸಂಘಟನೆ ಹಾಗೂ ಅಗ್ನಿಶಾಮಕದಳ ನೆರವಿನಲ್ಲಿ ಸಿಬ್ಬಂದಿ ಅದನ್ನು ಸೆರೆ ಹಿಡಿಯುವಲ್ಲಿ ಸಫಲರಾದರು. ಆದರೆ ಅದರ ಕುತ್ತಿಗೆಗೆ ಬಿಗಿಯಾಗಿದ್ದ ಹಗ್ಗವನ್ನು ತೆಗೆಯಲು ಸಾಧ್ಯವಾಗಲಿಲ್ಲ. ಎರಡು ದಿನಗಳ ಕಾಲ
ಆಹಾರ, ನೀರು ನೀಡಿ ಉಪಚರಿಸಿದ ನಂತರ ಹೋರಿ ನಿಯಂತ್ರಣಕ್ಕೆ ಸಿಕ್ಕಿದೆ. ಬಳಿಕ ಭಾನುವಾರ ರಾತ್ರಿ ಅದರ ಕುತ್ತಿಗೆಯಲ್ಲಿ ಬಿಗಿಯಾಗಿದ್ದ ಹಗ್ಗವನ್ನು ತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದ್ದಾರೆ. ಆದರೆ, ಹಗ್ಗದ ಬಿಗಿತದಿಂದ ಹೋರಿನ ಕುತ್ತಿಗೆ ಸುತ್ತಲೂ ಗಾಯ ಉಂಟಾಗಿದೆ. ಹೀಗಾಗಿ ಸೋಮವಾರ ಪಶು ವೈದ್ಯಕೀಯ ತಜ್ಞರಿಂದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಎನ್ಎಂಪಿಟಿ ಅಧ್ಯಕ್ಷರು ತಿಳಿಸಿದ್ದಾರೆ.
ಎನ್ಎಂಪಿಟಿ ಯೋಜನೆಗೆ ಭೂಸ್ವಾಧೀನ ಬಳಿಕ ಸಂತ್ರಸ್ತರು ಬೇರೆ ಕಡೆಗೆ ಸ್ಥಳಾಂತರಗೊಂಡರೆ, ಸುಮಾರು ೫೦೦ರಷ್ಟು ಜಾನುವಾರುಗಳು ಅಲ್ಲೇ ಅಡ್ಡಾಡುತ್ತಿದ್ದವು. ಈ ಸಂಖ್ಯೆ ಈಗ ೧೦೦ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಪಣಂಬೂರಿನಲ್ಲಿ ಕೋಡುವಿನಲ್ಲಿ ಗೆಡ್ಡೆ ಉಂಟಾಗಿ ಹೋರಿಯೊಂದು ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅದರ ಹೊಟ್ಟೆಯಲ್ಲಿ ೫೦ ಕೆಜಿ ಪ್ಲಾಸ್ಟಿಕ್ ಪತ್ತೆಯಾಗಿತ್ತು.
ಮಂಗಳೂರು: ಕುತ್ತಿಗೆಯಲ್ಲಿ ಹಗ್ಗ ಬಿಗಿಗೊಂಡು ಪ್ರಾಣಾಪಾಯಕ್ಕೆ ಸಿಲುಕಿದ್ದ ಹೋರಿಯನ್ನು ಮಂಗಳೂರಿನ ನವಮಂಗಳೂರು ಬಂದರು ಮಂಡಳಿ(ಎನ್ಎಂಪಿಟಿ)ಸಿಬ್ಬಂದಿ ರಕ್ಷಿಸಿದ್ದಾರೆ.
ಕಳೆದ ಫೆಬ್ರವರಿಯಿಂದ ಕುತ್ತಿಗೆಗೆ ಹಗ್ಗ ಬಿಗಿಗೊಂಡು ಹೋರಿಯೊಂದು ಒದ್ದಾಡುತ್ತಿತ್ತು. ಯಾರೊಬ್ಬರನ್ನೂ ಸ್ಪರ್ಶಿಸಲೂ ಬಿಡದೇ ವೇದನೆ ಅನುಭವಿಸುತ್ತಿದ್ದ ಹೋರಿಯ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಎನ್ಎಂಪಿಟಿ ಅಗ್ನಿಶಾಮಕದಳ ಸಿಬ್ಬಂದಿ ಭಾನುವಾರ ರಾತ್ರಿ ತುಂಡರಿಸಿ ಜೀವದಾನ ಮಾಡಿದ್ದಾರೆ.
ಎನ್ಎಂಪಿಟಿ ಸುತ್ತಲೂ ಓಡಾಡುತ್ತಿದ್ದ ಹೋರಿಯ ಕುತ್ತಿಗೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಹಗ್ಗ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಸುರತ್ಕಲ್, ಪಣಂಬೂರು ನಾಗರಿಕರು, ಎನಿಮಲ್ ಕೇರ್ ಟ್ರಸ್ಟ್ ಪ್ರತಿನಿಧಿಗಳು ಹೋರಿಯನ್ನು ಹಿಡಿಯಲು ಪ್ರಯತ್ನಿಸಿದ್ದರು. ಆದರೆ, ದಷ್ಟಪುಷ್ಟವಾಗಿ ಆಕ್ರಮಣಕಾರಿ ವರ್ತನೆ ಹೊಂದಿದ್ದ ಹೋರಿ ಯಾರ ಕೈಗೂ ಸಿಕ್ಕಿರಲಿಲ್ಲ. ಅದರ ಕುತ್ತಿಗೆಯಲ್ಲಿ ಹಗ್ಗ ಬಿಗಿಗೊಂಡು ಅದಕ್ಕೆ ಆಹಾರ ಸೇವನೆ ಮಾಡಲಾಗದ ಸ್ಥಿತಿ ಉಂಟಾಗಿತ್ತು.
ಶನಿವಾರ ಎನ್ಎಂಪಿಟಿ ಆವರಣ ಪ್ರದೇಶಿಸಿದ್ದ ಈ ಹೋರಿ ನೀರು ಕುಡಿಯಲು ಆಗಮಿಸಿತ್ತು. ಆಗ ಅದರ ಕುತ್ತಿಗೆಯಲ್ಲಿ ಹಗ್ಗ ಬಿಗಿದುಕೊಂಡಿರುವುದನ್ನು ಗಮನಿಸಿದ ಸಿಬ್ಬಂದಿ, ಅದನ್ನು ಹಿಡಿಯಲು ಯತ್ನಿಸಿದ್ದರು. ಆದರೆ ಅದು ಹಿಡಿಯಲು ಸಿಗದೆ ಆಕ್ರಮಣ ನಡೆಸಲು ಮುಂದಾಗಿತ್ತು.
ಕೊನೆಗೂ ಪ್ರಾಣಿ ದಯಾ ಸಂಘಟನೆ ಹಾಗೂ ಅಗ್ನಿಶಾಮಕದಳ ನೆರವಿನಲ್ಲಿ ಸಿಬ್ಬಂದಿ ಅದನ್ನು ಸೆರೆ ಹಿಡಿಯುವಲ್ಲಿ ಸಫಲರಾದರು. ಆದರೆ ಅದರ ಕುತ್ತಿಗೆಗೆ ಬಿಗಿಯಾಗಿದ್ದ ಹಗ್ಗವನ್ನು ತೆಗೆಯಲು ಸಾಧ್ಯವಾಗಲಿಲ್ಲ. ಎರಡು ದಿನಗಳ ಕಾಲ
ಆಹಾರ, ನೀರು ನೀಡಿ ಉಪಚರಿಸಿದ ನಂತರ ಹೋರಿ ನಿಯಂತ್ರಣಕ್ಕೆ ಸಿಕ್ಕಿದೆ. ಬಳಿಕ ಭಾನುವಾರ ರಾತ್ರಿ ಅದರ ಕುತ್ತಿಗೆಯಲ್ಲಿ ಬಿಗಿಯಾಗಿದ್ದ ಹಗ್ಗವನ್ನು ತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದ್ದಾರೆ. ಆದರೆ, ಹಗ್ಗದ ಬಿಗಿತದಿಂದ ಹೋರಿನ ಕುತ್ತಿಗೆ ಸುತ್ತಲೂ ಗಾಯ ಉಂಟಾಗಿದೆ. ಹೀಗಾಗಿ ಸೋಮವಾರ ಪಶು ವೈದ್ಯಕೀಯ ತಜ್ಞರಿಂದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಎನ್ಎಂಪಿಟಿ ಅಧ್ಯಕ್ಷರು ತಿಳಿಸಿದ್ದಾರೆ.
ಎನ್ಎಂಪಿಟಿ ಯೋಜನೆಗೆ ಭೂಸ್ವಾಧೀನ ಬಳಿಕ ಸಂತ್ರಸ್ತರು ಬೇರೆ ಕಡೆಗೆ ಸ್ಥಳಾಂತರಗೊಂಡರೆ, ಸುಮಾರು 500ರಷ್ಟು ಜಾನುವಾರುಗಳು ಅಲ್ಲೇ ಅಡ್ಡಾಡುತ್ತಿದ್ದವು. ಈ ಸಂಖ್ಯೆ ಈಗ 100ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಪಣಂಬೂರಿನಲ್ಲಿ ಕೋಡುವಿನಲ್ಲಿ ಗೆಡ್ಡೆ ಉಂಟಾಗಿ ಹೋರಿಯೊಂದು ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅದರ ಹೊಟ್ಟೆಯಲ್ಲಿ 50 ಕೆಜಿ ಪ್ಲಾಸ್ಟಿಕ್ ಪತ್ತೆಯಾಗಿತ್ತು.