Thursday, November 26, 2020

Latest Posts

ವಿಜಯನಗರ ಪ್ರತ್ಯೇಕ ಜಿಲ್ಲೆ ಬಗ್ಗೆ ಸೋಮಶೇಖರ್ ರೆಡ್ಡಿ ಮನವೊಲಿಸುತ್ತೇನೆ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ, ಮೈಸೂರು ಬಳ್ಳಾರಿಯಿಂದ ವಿಭಜನೆಗೊಂಡು ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ಇದರಿಂದ ಆ ಜಿಲ್ಲೆಗೆ ಅನುಕೂಲವಾಗಲಿದೆಯೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದರು. ಗುರುವಾರ ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ...

ಒಂದೇ ರೀತಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ನಾಳೆನ ಉಪಹಾರಕ್ಕೆ ಮಸಾಲ ರೊಟ್ಟಿ ಮಾಡಿ…

ಯಾವಾಗಲು ಒಂದೇ ರೀತಿ‌ ರೊಟ್ಟಿ ತಿಂದು‌ ನಿಮಗೂ ಬೇಜಾರಾಗಿರುತ್ತೆ. ಮಾಡುವವರಿಗೂ ಬೇಸರವಾಗಿರುತ್ತದೆ. ನೀವೇಕೆ ಮಸಾಲ ರೊಟ್ಟಿ ಮಾಡಬಾರದು? ಮಾಡಬಹುದು ಆದರೆ ಹೇಗೆ ಮಾಡೋದು ಅಂತ ಚಿಂತೆ ಅಲ್ವಾ. ಮಸಾಲ ರೊಟ್ಟಿ ಸುಲಭವಾಗಿ ಹೇಗೆ‌...

ಮೈಸೂರು ವಿವಿಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಗೀತ ಲೋಕದ ದಿಗ್ಗಜ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಸಂಗೀತ ಪೀಠ ತೆರೆಯಲು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ.ಬಿ ಸಂಗೀತ ಪೀಠ ಸ್ಥಾಪಿಸಲು...

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸರಳ, ಸಾಂಪ್ರದಾಯಿಕವಾಗಿ ಮಂಗಳೂರು ದಸರಾ ಸಂಪನ್ನ

ಮಂಗಳೂರು: ವೈಭವ, ಸಂಭ್ರಮ, ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಸರಳ ಮತ್ತು ಸಾಂಪ್ರದಾಯಿಕವಾಗಿ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಸೋಮವಾರ ಸಂಪನ್ನಗೊಂಡಿತು.
ಕೊರೋನಾ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಕ್ಷೇತ್ರದ ಪುಷ್ಕರಿಣಿಯಲ್ಲಿ ಶಾರದಾ ಮಾತೆ, ನವದುರ್ಗೆಯರ ವಿಸರ್ಜನೆಯೊಂದಿಗೆ ‘ಮಂಗಳೂರು ದಸರಾ’ ಈ ಬಾರಿ ದೇವಾಲಯದ ಆವರಣದೊಳಗೆ ನೆರವೇರಿತು.
ರಾತ್ರಿಯಿಡೀ ಶಾರದಾ ಮಾತೆ, ನವದುರ್ಗೆಯರ ವಿಗ್ರಹದ ಮೆರವಣಿಗೆ, ವಿದ್ಯುತ್ ಅಲಂಕಾರದ ಹೊಂಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಮೆರವಣಿಗೆಯ ಚೆಲುವು, ಸಾಲು ಸಾಲು ಸ್ತಬ್ದಚಿತ್ರಗಳ ಮೆರುಗು, ಲಕ್ಷಾಂತರ ಭಕ್ತರ ಸಂದೋಹ ಈ ಬಾರಿಯ ಮಂಗಳೂರು ದಸರಾದಲ್ಲಿ ಮರೆಯಾಗಿತ್ತು. ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಮೆರವಣಿಗೆ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ನಡೆಯಿತು.
ಶಾರದಾ ಮಾತೆ ಸೇರಿದಂತೆ ನವದುರ್ಗೆಯರ ವಿಸರ್ಜನೆಗೂ ಮುನ್ನ ಸೋಮವಾರ ಸಂಜೆ ಸರ್ವ ಪೂಜಾ ವಿ ವಿಧಾನಗಳೊಂದಿಗೆ ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊಂಡವು. ಭಕ್ತರ ಜಯ ಘೋಷ, ಮಂಗಳ ವಾದ್ಯನಾದಗಳೊಂದಿಗೆ ದೇವಾಲಯದ ಸ್ವರ್ಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶಾರದಾ ಮಾತೆ ಪ್ರತಿಮೆಗಳನ್ನು ದೇವಾಲಯದ ಆವರದಲ್ಲಿರುವ ಪುಷ್ಕರಿಣಿಯಲ್ಲಿ ವಿಸರ್ಜಿಸಲಾಯಿತು.
ಇದಕ್ಕೂ ಮುನ್ನ ಬೆಳಗ್ಗೆ ವಾಗೀಶ್ವರಿ ದುರ್ಗಾ ಹೋಮ, ಮಧ್ಯಾಹ್ನ ಶಿವಪೂಜೆ, ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ, ಪುಷ್ಕರಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ, ನವದುರ್ಗೆ, ಶ್ರೀಶಾರದಾ ವಿಸರ್ಜನಾ ಪೂಜೆ ನೆರವೇರಿತು.
ಈ ಸಂದರ್ಭ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಶೇಖರ ಪೂಜಾರಿ, ರವಿಶಂಕರ ಮಿಜಾರು, ಅಭಿವೃದ್ಧಿ ಸಮಿತಿಯ ವೇದಕುಮಾರ್, ಹರಿಕೃಷ್ಣ ಬಂಟ್ವಾಳ್, ಬಿ.ಜಿ. ಸುವರ್ಣ, ರಮಾನಾಥ ಕಾರಂದೂರು ಉಪಸ್ಥಿತರಿದ್ದರು.
ಕೋವಿಡ್-19 ಹಿನ್ನೆಲೆ ಇರದ ಶೋಭಾಯಾತ್ರೆ
ಕೋವಿಡ್-19 ಹಿನ್ನೆಲೆಯಲ್ಲಿ ದಸರಾ ಶೋಭಾಯಾತ್ರೆ ಇಲ್ಲದ ಕಾರಣ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ನಗರ ಪ್ರದಕ್ಷಿಣೆ ನಡೆಸಲಾಯಿತು. ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್ , ಲಾಲ್‌ಬಾಗ್, ಬಳ್‌ಬಾಗ್, ಪಿವಿಎಸ್, ನವಭಾರತ್ ಸರ್ಕಲ್ , ಕೆ.ಎಸ್. ರಾವ್ ರಸ್ತೆ, ಪಿ.ಎಂ. ರಾವ್ ರೋಡ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗಕ್ಕೆ ಬಂದು ವಿ.ಟಿ. ರಸ್ತೆ ಮೂಲಕ ನವಭಾರತ್ ಸರ್ಕಲ್‌ಗೆ ಮರಳಿ ಚಿತ್ರಾ ಟಾಕೀಸ್, ಅಳಕೆಯಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ವಿಜಯನಗರ ಪ್ರತ್ಯೇಕ ಜಿಲ್ಲೆ ಬಗ್ಗೆ ಸೋಮಶೇಖರ್ ರೆಡ್ಡಿ ಮನವೊಲಿಸುತ್ತೇನೆ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ, ಮೈಸೂರು ಬಳ್ಳಾರಿಯಿಂದ ವಿಭಜನೆಗೊಂಡು ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ಇದರಿಂದ ಆ ಜಿಲ್ಲೆಗೆ ಅನುಕೂಲವಾಗಲಿದೆಯೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದರು. ಗುರುವಾರ ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ...

ಒಂದೇ ರೀತಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ನಾಳೆನ ಉಪಹಾರಕ್ಕೆ ಮಸಾಲ ರೊಟ್ಟಿ ಮಾಡಿ…

ಯಾವಾಗಲು ಒಂದೇ ರೀತಿ‌ ರೊಟ್ಟಿ ತಿಂದು‌ ನಿಮಗೂ ಬೇಜಾರಾಗಿರುತ್ತೆ. ಮಾಡುವವರಿಗೂ ಬೇಸರವಾಗಿರುತ್ತದೆ. ನೀವೇಕೆ ಮಸಾಲ ರೊಟ್ಟಿ ಮಾಡಬಾರದು? ಮಾಡಬಹುದು ಆದರೆ ಹೇಗೆ ಮಾಡೋದು ಅಂತ ಚಿಂತೆ ಅಲ್ವಾ. ಮಸಾಲ ರೊಟ್ಟಿ ಸುಲಭವಾಗಿ ಹೇಗೆ‌...

ಮೈಸೂರು ವಿವಿಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಗೀತ ಲೋಕದ ದಿಗ್ಗಜ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಸಂಗೀತ ಪೀಠ ತೆರೆಯಲು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ.ಬಿ ಸಂಗೀತ ಪೀಠ ಸ್ಥಾಪಿಸಲು...

ಹುಟ್ಟೂರಿನಲ್ಲಿಯೇ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ನಿನ್ನೆ ನಿಧನರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ದಕ್ಷಿಣ ಗುಜರಾತ್‌ನ ಭರೂಚ್ ಜಿಲ್ಲೆಯ ಪಿರಮಾನ್‌ ಗ್ರಾಮದಲ್ಲಿ...

Don't Miss

ವಿಜಯನಗರ ಪ್ರತ್ಯೇಕ ಜಿಲ್ಲೆ ಬಗ್ಗೆ ಸೋಮಶೇಖರ್ ರೆಡ್ಡಿ ಮನವೊಲಿಸುತ್ತೇನೆ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ, ಮೈಸೂರು ಬಳ್ಳಾರಿಯಿಂದ ವಿಭಜನೆಗೊಂಡು ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ಇದರಿಂದ ಆ ಜಿಲ್ಲೆಗೆ ಅನುಕೂಲವಾಗಲಿದೆಯೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದರು. ಗುರುವಾರ ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ...

ಒಂದೇ ರೀತಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ನಾಳೆನ ಉಪಹಾರಕ್ಕೆ ಮಸಾಲ ರೊಟ್ಟಿ ಮಾಡಿ…

ಯಾವಾಗಲು ಒಂದೇ ರೀತಿ‌ ರೊಟ್ಟಿ ತಿಂದು‌ ನಿಮಗೂ ಬೇಜಾರಾಗಿರುತ್ತೆ. ಮಾಡುವವರಿಗೂ ಬೇಸರವಾಗಿರುತ್ತದೆ. ನೀವೇಕೆ ಮಸಾಲ ರೊಟ್ಟಿ ಮಾಡಬಾರದು? ಮಾಡಬಹುದು ಆದರೆ ಹೇಗೆ ಮಾಡೋದು ಅಂತ ಚಿಂತೆ ಅಲ್ವಾ. ಮಸಾಲ ರೊಟ್ಟಿ ಸುಲಭವಾಗಿ ಹೇಗೆ‌...

ಮೈಸೂರು ವಿವಿಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಗೀತ ಲೋಕದ ದಿಗ್ಗಜ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಸಂಗೀತ ಪೀಠ ತೆರೆಯಲು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ.ಬಿ ಸಂಗೀತ ಪೀಠ ಸ್ಥಾಪಿಸಲು...
error: Content is protected !!