ಕುಮಟಾ: ಮೊದಲ ಬಾರಿ ಕುಮಟಾದಲ್ಲೂ ಕೊರೋನಾ ಸದ್ದು ಮಾಡಿದ್ದು, ಇಲ್ಲಿಯ ಕ್ವರಂಟೈನ್ ಕೇಂದ್ರದಲ್ಲಿದ್ದು ಕೊರೋನಾ ಸೋಂಕು ದೃಢಪಟ್ಟಿರುವ 26 ವರ್ಷದ ಯುವಕನನ್ನು ಈಗ ಕಾರವಾರ ವೈದ್ಯಕೀಯ ಕಾಲೇಜಿನ ಕೋವಿಡ್-19 ವಾರ್ಡಿಗೆ ಸ್ಥಳಾಂತರಿಸಲಾಗುತ್ತಿದೆ.
ಈ ನಡುವೆ ದೆಹಲಿಯಿಂದ ಬಂದಿದ್ದ ಯುವಕನೂ ಸೋಂಕು ಪೀಡಿತನಾಗಿರುವ ವರದಿ ಬರತೊಡಗಿದ್ದು ಇನ್ನಷ್ಟೇ ಸುದ್ದಿ ದೃಡವಾಗಬೇಕಿದೆ. ಈತನೂ ಕ್ವಾರಂಟೈನ್ ನಲ್ಲಿದ್ದಾನೆ. ಮೇ.5 ರಂದು ರತ್ನಾಗಿರಿಯಿಂದ ಬಂದಿದ್ದ ವನ್ನಳ್ಳಿ ಯುವಕನಲ್ಲಿ ಸೋಂಕು ದೃಢಪಡುತ್ತಲೇ ಧಾವಿಸಿ ಬಂದ ಜಿಲ್ಲಾಧಿಕಾರಿ ಡಾ. ಹರೀಶಕುಮಾರ, ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ತಾಲೂಕು ಆಡಳಿತದ ಜೊತೆಗೆ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚೆ ನಡೆಸಿದರು.
ಈ ಮಧ್ಯೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸೋಂಕಿತ ವ್ಯಕ್ತಿಯನ್ನು ಹಿರೇಗುತ್ತಿ ನಾಕಾದಲ್ಲೇ ತಡೆದು ಕ್ವಾರಂಟೈನ್ ಗೆ ಕಳಿಸಲಾಗಿತ್ತು. ಹೀಗಾಗಿ ಕುಮಟಾದ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.