Monday, August 15, 2022

Latest Posts

ಕುಮಾರ ಬಂಗಾರಪ್ಪ ಹುಟ್ಟಹಬ್ಬಕ್ಕೆ ಶುಭಕೋರಿದ ದರ್ಶನ್

ನಟ-ರಾಜಕಾರಣಿ ಕುಮಾರ ಬಂಗಾರಪ್ಪ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೊರಬ ವಿ ಧಾನಸ ಭಾ  ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಸಿನಿಮಾ ಕಲಾವಿದರು ಶು ಭಕೋರಿದ್ದಾರೆ.

ಕುಮಾರ ಬಂಗಾರಪ್ಪ ಅವರ ಜೊತೆ ಉತ್ತಮ ಒಡನಾಟ ಹೊಂದಿರುವ ನಟ ದರ್ಶನ್ ಟ್ವಿಟ್ಟರ್ ಮೂಲಕ ಶು ಭಾಶಯ ತಿಳಿಸಿದ್ದು, ’’ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ನಮ್ಮ ಕುಮಾರ್ ಬಂಗಾರಪ್ಪರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶು ಭಾಶಯಗಳು. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ’’ ಎಂದು ಹಾರೈಸಿದ್ದಾರೆ.

ದರ್ಶನ್ ಜೊತೆಯಲ್ಲಿ ಕುಮಾರ ಬಂಗಾರಪ್ಪ ಅವರು ಚಕ್ರವರ್ತಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಸುಮಾರು ೧೩ ವರ್ಷದ ನಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ಮತ್ತೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಈ ಚಿತ್ರದ ಬಳಿಕವೂ ಕುಮಾರ ಬಂಗಾರಪ್ಪ ಅವರ ಕುಟುಂಬಕ್ಕೆ ದಾಸ ಆಪ್ತ ವ್ಯಕ್ತಿಯಾಗಿದ್ದಾರೆ. ಇನ್ನು ನಿರ್ದೇಶಕ ಪವನ್ ಒಡೆರ್ಯ ಸಹ ಕುಮಾರ ಬಂಗಾರಪ್ಪ ಜನುಮದಿನಕ್ಕೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ’’ಹುಟ್ಟುಹಬ್ಬದ ಹಾರ್ದಿಕ ಶು ಭಾಶಯಗಳು ಸರ್. ದೇವರು ನಿಮಗೆ ಎಲ್ಲಾ ರೀತಿಯ ಸಿರಿ ಸಂಪತ್ತು ಕೊಟ್ಟು ಕಾಪಾಡಲಿ’’ ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss