Monday, July 4, 2022

Latest Posts

ಕುರುಬರಿಗೆ ನ್ಯಾಯ ಸಿಕ್ಕರೆ ಹಿಂದುತ್ವಕ್ಕೆ ನ್ಯಾಯ ಸಿಕ್ಕಿದಂತೆ ಆಗುತ್ತೆ: ಸಚಿವ ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ, ಮೈಸೂರು:

ತಮ್ಮ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ಹೋರಾಟ ನಡೆಸುವ ಕುರುಬರಿಗೆ ನ್ಯಾಯ ಸಿಕ್ಕರೆ, ಹಿಂದುತ್ವಕ್ಕೆ ನ್ಯಾಯ ಸಿಕ್ಕಿದಂತೆ ಆಗುತ್ತೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ಮೈಸೂರಿನ ಸಿದ್ಧಾರ್ಥನಗರಲದಲಿರುವ ಕನಕ ಸಮುದಾಯ ಭವನದಲ್ಲಿ ನಡೆದ ಕುರುಬರ ಎಸ್ ಟಿ ಹೋರಾಟ ಸಮಿತಿಯ ಮೈಸೂರು ವಿಭಾಗದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಜೀವಮಾನ ಪೂರ್ತಿ ಹಿಂದುತ್ವ ಸಿದ್ಧಾಂತ ನಂಬಿದವನು. ಹಿಂದುತ್ವ ಪ್ರತಿಪಾದಿಸಿದವನು ಕುರುಬ ಅಂತ ಹೋದರೆ ತಪ್ಪಾಗುತ್ತದೆ ಅಂತ ಭಾವಿಸಿದ್ದೆ. ಶ್ರೀ ನಿರಂಜನಾನoದಪುರಿ ಸ್ವಾಮೀಜಿ ನನಗೆ ಸ್ಪೂರ್ತಿ ನೀಡಿದರು. ಕುರುಬರೂ ಸಹ ಹಿಂದೂಗಳು. ಕುರುಬರಿಗೆ ನ್ಯಾಯ ಸಿಕ್ಕರೆ ಹಿಂದುತ್ವಕ್ಕೆ ನ್ಯಾಯ ಸಿಗುತ್ತೆ ಅಂತ ಹೇಳಿದರು. ಅಂದಿನಿ0ದ ಹೋರಾಟದಲ್ಲಿ ಇದ್ದೇನೆ ಎಂದು ನುಡಿದರು.
ಹೋರಾಟದಲ್ಲಿ ಆರ್ ಎಸ್ ಎಸ್ ಪಾತ್ರ ಇಲ್ಲ :
ಕುರುಬರನ್ನು ಎಸ್ ಟಿಗೆ ಸೇರಿಸುವುದು ನನ್ನ ಕರ್ತವ್ಯ. ನಾನು ಒಬ್ಬ ಮಂತ್ರಿಯಾಗಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ನೀವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ಮಾಡಿ ಅಂತ ಕೆಲವರು ಹೇಳುತ್ತಾರೆ. ಆದರೆ ನಾನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ಕಣ್ಣು ತೆರೆಸುವ ಸಲುವಾಗಿ ಹೋರಾಟದಲ್ಲಿ ಇದ್ದೇನೆ. ಅದಕ್ಕಾಗಿಯೇ ಜಾಥಾ, ಪಾದಯಾತ್ರೆ, ಸಭೆ ಮಾಡುತ್ತಿದ್ದೇವೆ. ಈ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರ ಇಲ್ಲ. ಆರ್‌ಎಸ್‌ಎಸ್ ಸಮಾಜವನ್ನು ಕೂಡಿಸುತ್ತಿದೆ. ಸಮಾಜವನ್ನು ಹೊಡೆಯುವ ಕೆಲಸ ಮಾಡಲ್ಲ. ಆರ್‌ಎಸ್‌ಎಸ್ ಬಗ್ಗೆ ಏನೂ ಗೊತ್ತಿಲ್ಲದೆ ಮಾತನಾಡಿದರೆ, ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಕುರುಬ ಸಮುದಾಯವನ್ನ ಎಸ್ ಟಿಗೆ ಸೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದಲ್ಲಿ ರಾಜಕೀಯ ಬೇಡ. ಇದರಲ್ಲಿ ಸ್ವಾಮೀಜಿ ಇದ್ದಾರೆ. ಇದನ್ನು ದೇವಸ್ಥಾನ ಅಂತ ಭಾವಿಸೋಣ. ನಮ್ಮ ರಾಜಕಾರಣವನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬರೋಣ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss