ಹೊಸ ದಿಗಂತ ವರದಿ, ತಿಪಟೂರು :
ಕುರುಬ ಸಮಾಜವನ್ನು ಎಸ್ಟಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿಸದಿದ್ದರೆ ಗ್ರಾಮ ಪಂಚಾಯತಿಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಂಗಾಪುರ ಗ್ರಾ.ಪಂ.ನ ಹೊಸಹಳ್ಳಿ ಕ್ಷೇತ್ರದ ನೂತನ ಸದಸ್ಯ ವಿಶ್ವನಾಥ್.ಎಚ್.ಎಸ್. ತಿಳಿಸಿದ್ದಾರೆ.
ರಾಜ್ಯದಾದ್ಯಮತ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬ ಒಕ್ಕೊರಲಿನ ಕೂಗು ಕೇಳಿ ಬಂದಿದ್ದು, ಸ್ವಾಮೀಜಿಗಳ ಪಾದಯಾತ್ರೆ ನಡೆಸಿ ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಕುರುಬ ಸಮಾಜವನ್ನು ಬ್ರಿಟಿಷರು ಎಸ್ಟಿ ಮೀಸಲಾತಿಯನ್ನೇ ನೀಡಿದ್ದರು. ಆದರೆ ಸ್ವಾತಂತ್ರ್ಯ ನಂತರದಲ್ಲಿ ಸಂವಿಧಾನ ರಚನೆಯ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರುಗಳಲ್ಲಿ ಒಗ್ಗಟ್ಟು ಇಲ್ಲದ ಕಾರಣಕ್ಕೆ ಹೊರಗಿಡಲಾಯಿತು. ಇದರಿಂದಾಗಿ ಸಮಾಜವು ಅನೇಕ ಜ್ವಾಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೇಂದ್ರ ಸರ್ಕಾರ ಪ್ರಧಾನಿ ನರೇಂದರ ಮೋದಿಯವರು ಮಹರಾಷ್ಟ್ರದಲ್ಲಿ ಹೇಳಿಕೆ ನೀಡಿದಂತೆ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂದರು. ಇಲ್ಲದಿದ್ದರೆ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.