Friday, July 1, 2022

Latest Posts

ಕುರುಬ ಸಮುದಾಯ ಒಡೆಯಲು ಆರ್‌ಎಸ್‌ಎಸ್ ಹುನ್ನಾರ: ಮಾಜಿ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕುರುಬ ಸಮುದಾಯಕ್ಕೆ ತುಂಬಾನೇ ಒಗ್ಗಟ್ಟಿದ್ದು, ಅದನ್ನು ಒಡೆಯುವ ಕೆಲಸ ಆರ್ ಎಸ್ ಎಸ್ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ವರಸೆ ಆರಂಭವಾಗಿದೆ ಎಂದಿದ್ದಾರೆ.
ಕುರುಬ ಸಮುದಾಯದ ಒಗ್ಗಟ್ಟನ್ನು ಮುರಿಯುವ ಹಿಂದೆ ಆರ್‌ಎಸ್‌ಎಸ್ನ ಕೈವಾಡವಿದೆ. ಇತ್ತೀಚೆಗೆ ಎಲ್ಲರಿಗೂ ಕುರುಬ ಸಮುದಾಯದ ಮೇಲೆ ಕಣ್ಣಿದ್ದಂತಿದೆ. ಎಲ್ಲರೂ ಇತ್ತಲೇ ಗಮನ ಹರಿಸುತ್ತಿದ್ದಾರೆ. ಸಚಿವ ಈಶ್ವರಪ್ಪ ಈ ಹಿಂದೆ ಕನಕ ಗೋಪುರ ಕೆಡವಿದಾಗ ಇರಲಿಲ್ಲ,ಇದೀಗ ಕುರುಬರ ಮೇಲೆ ಬಾರಿ ಆಸಕ್ತಿ ಮೂಡಿದೆ. ಇಂಥವರೆಲ್ಲ ಪ್ರಭಾವಿ ನಾಯಕರಾ? ಆರ್‌ಎಸ್‌ಎಸ್‌ನವರು ಈಶ್ವರಪ್ಪವರ ಬಳಿ ಮಾತನಾಡಿಸುತ್ತಿದ್ದಾರೆ. ಇದು ಈಶ್ವರಪ್ಪ ಅವರ ಸ್ವಂತ ಬುದ್ಧಿಯಂತೂ ಅಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss