ಕುವೆಂಪು ವಿವಿಗೆ ಏ.14ರ ವರೆಗೆ ರಜೆ ಮುಂದುವರಿಕೆ

0
180

ಶಿವಮೊಗ್ಗ: ಕೋವಿಡ್-19 ವೈರಾಣು ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಕುವೆಂಪು ವಿಶ್ವವಿದ್ಯಾಲಯವು ಏಪ್ರಿಲ್ 14ರ ವರೆಗೆ ರಜೆ ಮುಂದುವರಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶಾನುಸಾರ ವಿವಿಯು ಮಾ. 23ರಂದು ತನ್ನೆಲ್ಲ ಸಿಬ್ಬಂದಿ ವರ್ಗಕ್ಕೆ ಮಾ. 31ರ ವರೆಗೆ ರಜೆ ಘೋಷಿಸಿತ್ತು. ಪ್ರಸ್ತುತ ಈ ರಜೆಯನ್ನು ಏ. 14ರ ವರೆಗೆ ಮುಂದುವರಿಸಿ ಸುತ್ತೋಲೆ ಹೊರಡಿಸಿದೆ.

ವಿಶ್ವವಿದ್ಯಾಲಯದ ಎಲ್ಲ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಸ್ನಾತಕೋತ್ತರ ಕೇಂದ್ರಗಳು, ಘಟಕ/ನೇರ ಆಡಳಿತ ಕಾಲೇಜುಗಳಲ್ಲಿರುವ ಬೋಧಕ, ಬೋಧಕೇತರ, ಅತಿಥಿ ಉಪನ್ಯಾಸಕರು, ಏಜೆನ್ಸಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಕುಲಸಚಿವ ಪ್ರೊ. ಎಸ್ ಎಸ್ ಪಾಟೀಲ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here