ಹೊಸ ದಿಗಂತ ವರದಿ, ಶಂಕರಘಟ್ಟ:
ಕುವೆಂಪು ವಿಶ್ವವಿದ್ಯಾಲಯದ 2020-21ನೇ ಸಾಲಿನ ಸ್ನಾತಕೋತ್ತರ ಪದವಿ ಹಾಗೂ ಸ್ನಾಯಕೋತ್ತರ ಡಿಪ್ಲೋಮೊ ಕೋರ್ಸ್ಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಲು ನಿಗಧದಿಗೊಳಿಸಿಲಾಗಿದ್ದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿತ್ತು. ಆದರೆ ವಿವಿ ಇಂದು ಹೊಸ ಆದೇಶವನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 3ರ ವರೆಗೆ ವಿಸ್ತರಿಸಿದೆ. ಕೊನೆಯ ದಿನದಂದು ಕನಕದಾಸ ಜಯಂತಿ ಪ್ರಯುಕ್ತ ಸಾರ್ವಜನಿಕ ರಜೆ ಇದ್ದರೂ ಆನ್ ಲೈನ್ ಪ್ರವೇಶಾತಿ ತೆರೆದಿರುತ್ತದೆ ಎಂದು ವಿವಿ ಕುಲಸಚಿವ ಪ್ರೊ. ಎಸ್ ಎಸ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.