ಹೊಸದಿಗಂತ ವರದಿ,ಶಿವಮೊಗ್ಗ:
ಕುವೈತ್ ನಲ್ಲಿ ಸಾಗರ ತಾಲೂಕಿನ ಯುವಕ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಲು ಕುವೈತ್ ಸರ್ಕಾರಕ್ಕೆ ಕೋರಬೇಕೆಂದು ಆತನ ಕುಟುಂಬ ಒತ್ತಾಯಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಚೂರಿಕಟ್ಟೆ ನಿವಾಸಿ ಹಾಸಂ ಫರೀದ್ ಸಾಬ್ ಕಳೆದ ಇಪ್ಪತ್ತು ತಿಂಗಳಿನಿಂದ ಕುವೈತ್ ನ ಮಾಬಲಾ ಏರಿಯಾದ ಲಾಜಿಸ್ಟಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಡಿಸೆಂಬರ್ 27 ರಂದು ರಾತ್ರಿ ಆತನಿಗೆ ಕರೆ ಮಾಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ನಂತರ ಆತನ ಸ್ನೇಹಿತರು ರೂಂ ಗೆ ಹೋಗಿ ನೋಡಿದಾಗ ಹಾಸಿಗೆಯಲ್ಲಿ ರಕ್ತ ಇರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಕುವೈತ್ ಸರ್ಕಾರವನ್ನು ಕೋರಬೇಕು. ಮೃತದೇಹವನ್ನು ತರಿಸಿ ಕೊಡಬೇಕು ಎಂದು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.